ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

46 ಮಂದಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

Rashmi Kasaragodu
Updated On : 12 Sept 2013, 12:18 pm

ಮೈಸೂರು: ಕರ್ನಾಟಕ ಕಾವಲುಪಡೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡುವ 2ನೇ ವರ್ಷದ ರಾಜ್ಯಮಟ್ಟದ ಆದರ್ಶ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭವು ಸೆ.15ರ ಬೆಳಗ್ಗೆ 10.30ಕ್ಕೆ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಂತದ 46 ಮಂದಿ ಶಿಕ್ಷಕ-ಶಿಕ್ಷಕಿಯರು ಹಾಗೂ 6 ಮಂದಿ ನಿವೃತ್ತ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಂಗ್ಲಿಷ್ ಕಲಿಕಾ ತರಬೇತಿ
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಗೃಹಿಣಿಯರಿಗಾಗಿ ಹಾಗೂ ಆಸಕ್ತ ಕಲಿಕಾರ್ಥಿಗಳಿಗಾಗಿ ಸೆ.15 ರಿಂದ 45 ದಿನಗಳ ಕಾಲದ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರವನ್ನು ಆರಂಭಿಸಲಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ತರಗತಿ ನಡೆಯಲಿದ್ದು, ಆಸಕ್ತರು ದೂ. 0821- 2515944 ಸಂಪರ್ಕಿಸಬಹುದು.
ಮುಕ್ತ ಭಂಡಾರ ಪುಸ್ತಕ ಮಾರಾಟ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ವಿವಿಧ ಬ್ಯಾಂಕ್ ಹುದ್ದೆಗಳ ನೇಮಕಾತಿ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊರತಂದಿರುವ ಮುಕ್ತಭಂಡಾರ ಅಧ್ಯಯನ ಪುಸ್ತಕವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದು, ಆಸಕ್ತರು 200 ನೀಡಿ ಕೇಂದ್ರದಲ್ಲಿ ಪಡೆಯಬಹುದು.
ನನ್ನ ದೇಶ- ನನ್ನ ಜನ
ಮೈವಿವಿ ಅಂತಾರಾಷ್ಟ್ರೀಯ ಕೇಂದ್ರ ಮತ್ತು ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದಿಂದ ಸೆ.13ರ ಮಧ್ಯಾಹ್ನ 3.30ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ನನ್ನ ದೇಶ- ನನ್ನ ಜನ ಎಂಬ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಂದ ಪರಿಚಯಾತ್ಮಾಕ ಕಾರ್ಯಕ್ರಮ ಏರ್ಪಡಿಸಿದ್ದು, ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಭಾಗವಹಿಸುವರು.
ಸಂಗೀತ ಕಾರ್ಯಕ್ರಮ
ಕೃಷ್ಣಮೂರ್ತಿಪುರಂನಲ್ಲಿರುವ ವನಿತಾ ಸದನದಲ್ಲಿ ಸೆ.13ರ ಸಂಜೆ 5ಕ್ಕೆ ಗಣೇಶೋತ್ಸವ ಅಂಗವಾಗಿ ಅನಸೂಯ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement