ಅಂಗವಿಕಲರ ಕುರ್ಚಿ ಮೂಲೆಗುಂಪು
ಮೈಸೂರು: ಮೈಸೂರು ನ್ಯಾಯಾಲಯಕ್ಕೆ ಬರುವ ಅಂಗವಿಕಲರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ನೀಡಿದ್ದ ವ್ಹೀಲ್ ಚೇರ್ಗಳು ಮೂಲೆಗುಂಪಾಗಿವೆ. ಕೆಲ ತಿಂಗಳ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 5 ವ್ಹೀಲ್ ಚೇರ್ಗಳನ್ನು ಕೊಡುಗೆಯಾಗಿ ನೀಡಿತ್ತು. ಆ ಚೇರುಗಳನ್ನು ನ್ಯಾಯಾಲಯದ ಅಧಿಕಾರಿಗಳು ಅಂಗವಿಕಲರಿಗೆ ಒದಗಿಸುವ ಬದಲಾಗಿ ಅವುಗಳನ್ನು ಕೋರ್ಟಿನ ನೆಲಮಾಳಿಗೆಯಲ್ಲಿರುವ ಕಳ್ಳ ಮಾಲುಗಳೊಂದಿಗೆ ಬಿಸಾಡಿದ್ದಾರೆ. ನ್ಯಾಯಾಲಯದ ಪ್ರವೇಶ ದ್ವಾರದ ಬಳಿಯಲ್ಲಿರುವ ಪೊಲೀಸ್ ಚೌಕಿಯ ಬಳಿ ಈ ಚೇರುಗಳನ್ನು ಇಟ್ಟರೆ ದಾನ ನೀಡಿದ ಬ್ಯಾಂಕಿನ ಉದ್ದೇಶ ಸಫಲವಾಗಬಹುದು ಎಂದು ಪ್ರಜ್ಞಾವಂತರ ಕಳಕಳಿ.