ಅರಸು ಕಾಲೇಜಿನ ಕಾಮಗಾರಿಗೂ ಚಾಲನೆ
ಹುಣಸೂರು: ಇಲ್ಲಿನ ಡಿ. ದೇವರಾಜು ಅರಸು ಪ್ರಥಮ ದರ್ಜೆ ಕಾಲೇಜಿನ ಎರಡನೇ ಅಂತಸ್ತಿನ ಕಾಮಗಾರಿಗೆ ಶಾಸಕ ಎಚ್.ಪಿ. ಮಂಜುನಾಥ್ ಒಂದು ಕೋಟಿ ರು. ವೆಚ್ಚದಲ್ಲಿ ಬುಧವಾರ ಚಾಲನೆ ನೀಡಿದರು. ಕಾಲೇಜಿನ ಸಮಸ್ಯೆಗಳ ಬಗ್ಗೆ ಪ್ರಾಂಶುಪಾಲ ಲೋಹಿತಾಶ್ವ ಮನವಿ ಮಾಡಿದರು. ಅದಕ್ಕೆ ಪೂರಕವಾಗಿ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಹಂತ-ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಕಾಲೇಜು ಸಮಿತಿ ಸದಸ್ಯರು, ಪ್ರಾಧ್ಯಾಪಕರು, ನಾಗರಿಕರು ಇದ್ದರು.