ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೈಕ್ ಸವಾರ ಬಾಲಕ ಸಾವು

Rashmi Kasaragodu
Updated On : 12 Sept 2013, 12:20 pm

ಕ.ಪ್ರ.ವಾರ್ತೆ   ಮೈಸೂರು   ಸೆ. 11
ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಬೈಕಿನಲ್ಲಿ ಬರುತ್ತಿದ್ದ ಬಾಲಕನೊಬ್ಬ ಆಯತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮೈಸೂರಿನ ಚಾಮುಂಡಿಪುರಂ ನಿವಾಸಿ ಜಯರಾಮನಾಯಕ ಎಂಬವರ ಪುತ್ರ ಸುಜಯ್ (14) ಮೃತಪಟ್ಟವರು. ಆತನೇ ಬೈಕ್ ಓಡಿಸುತ್ತಿದ್ದ. ಸುಜಯ್ ಮತ್ತು ತಾಯಿ ಸುಜಾತ ಇಬ್ಬರು ಮಂಗಳವಾರ ಬೈಕಿನಲ್ಲಿ ಆಲತ್ತೂರು ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಚಿಕ್ಕೇಗೌಡನಹುಂಡಿ ಬಳಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಸುಜಾತ ಮತ್ತು ಸುಜಯ್ ತಲೆಗೆ ತೀವ್ರ ಗಾಯಗಳಾಗಿತ್ತು. ಸುಜಯ್ ಮೃತಪಟ್ಟಿದ್ದು, ಸುಜಾತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆ ಎಸ್ಐ ಜಗದೀಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement