ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿವೇಕಾನಂದರ ಕೃತಿ ಪ್ರಕಟಿಸಲು ವಿವಿ ಚಿಂತನೆ

Rashmi Kasaragodu
Updated On : 12 Sept 2013, 12:19 pm

ಕ.ಪ್ರ.ವಾರ್ತೆ   ಮೈಸೂರು   ಸೆ. 11
ಸ್ವಾಮಿ ವಿವೇಕಾನಂದರ ಕುರಿತ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ವಿಷಯವನ್ನೊಳಗೊಂಡ ಕೃತಿಯನ್ನು ಮೈಸೂರು ವಿವಿಯಿಂದ ಹೊರತರುವುದಾಗಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಾನಸ ಗಂಗೋತ್ರಿಯ ಇಎಂಎಂಆರ್ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗ ಏರ್ಪಡಿಸಿರುವ ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರೀಯ ಪುನರ್ ನಿರ್ಮಾಣ ಹಾಗೂ ಸ್ವಾಮಿ ವಿವೇಕಾನಂದರ ವಿಶ್ವಮಾನವ ಸಂದೇಶ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನಿಂದ ವಿವೇಕಾನಂದರ ಬಗೆಗಿನ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ಎಲ್ಲಾ ಪ್ರಬಂಧಗಳನ್ನು ಸಂಗ್ರಹಿಸಿ ಕೊಟ್ಟರೆ ಮೈಸೂರು ವಿವಿಯಿಂದ ಉಚಿತವಾಗಿ ಪ್ರಕಟಿಸಲಾಗುವುದು. ಇದರಿಂದ ಈ ಎಲ್ಲಾ ವಿಚಾರಗಳೂ ಎಲ್ಲರಿಗೂ ತಿಳಿಯಲು ಅನುಕೂಲವಾಗುತ್ತದೆ. ವಿವೇಕಾನಂದರ ಬಗೆಗಿನ ಆಸಕ್ತಿ ದಿನೆ ದಿನೆ ಹೆಚ್ಚುತ್ತಿದೆ ಎಂದರು. ವಿವೇಕಾನಂದರ ವಿಚಾರಗಳು ಆಗಾಗ್ಗೆ ಕಿವಿಗೆ ಬೀಳುತ್ತಿದ್ದರೂ ಒಂದಷ್ಟು ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಮಾಜಿ ಅಧ್ಯಕ್ಷ ಸ್ವಾಮಿ ಜಗತ್ಮಾನಂದಜಿ ಅಧ್ಯಕ್ಷತೆ ವಹಿಸಿದ್ದರು. ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ. ರಾಮಚಂದ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ.ಕೆ.ಬಿ. ಪ್ರಭುಪ್ರಸಾದ್, ಡಾ.ಎಸ್. ವೆಂಕಟೇಶ್ ಇದ್ದರು. ಇದಕ್ಕೂ ಮುನ್ನ ಮಹಾರಾಜ ಪದವಿ ಪೂರ್ವ ಕಾಲೇಜಿನಿಂದ ವಿವೇಕಾನಂದರ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement