ವಿವೇಕಾನಂದರ ಜನ್ಮದಿನ ಪ್ರಯುಕ್ತ ಮ್ಯಾರಥಾನ್
ಕ.ಪ್ರ.ವಾರ್ತೆ ಮೈಸೂರು ಸೆ. 11
ನಗರದ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿಯು ವಿವೇಕಾನಂದ ಜಯಂತಿ ಅಂಗವಾಗಿ ನಗರದಲ್ಲಿ ಭಾರತ ಎದ್ದೇಳು, ವಿಶ್ವವನ್ನು ಬೆಳಗಿಸು ಎಂಬ ಸಂದೇಶ ಸಾರುವ ಮ್ಯಾರಥಾನ್ ಏರ್ಪಡಿಸಿತ್ತು.
ಇಲ್ಲಿನ ವಾಣಿವಿಲಾಸ ಮೊಹಲ್ಲಾ, ಚೆಲುವಾಂಬ ಉದ್ಯಾನದ ಸ್ವಾಮಿ ವಿವೇಕಾನಂದ ಪ್ರತಿಮೆಯಿಂದ, ಕೃಷ್ಣಮೂರ್ತಿಪುರಂ ಶಾರದಾವಿಲಾಸ ಕಾಲೇಜು ಮೈದಾನದಿಂದ ಮತ್ತು ಶೇಷಾದ್ರಿ ಐಯ್ಯರ್ ರಸ್ತೆಯ ವಿದ್ಯಾವರ್ಧಕ ಕಾಲೇಜಿನಿಂದ ಆರಂಭವಾದ ಈ ಮ್ಯಾರಥಾನ್ ಮಹಾರಾಜ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಂಡಿತು.
ಯುವಕರಿಗಾಗಿ ಸ್ವಾಮಿ ವಿವೇಕಾನಂದರು ನೀಡಿರುವ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಿತ್ತು. ನಗರದ ವಿವಿಧ ಪದವಿ ಪೂರ್ವ ಕಾಲೇಜು ಮಕ್ಕಳು ಈ ಮ್ಯಾರಥಾನ್ನಲ್ಲಿ ಭಾಗವಹಿಸಿ, ಸಂಭ್ರಮಿಸಿದರು. ಸಮಿತಿಯ ಸಂಚಾಲಕ ಎ. ಶ್ರೀಪತಿ ಸೇರಿದಂತೆ ಹಲವರು ಇದ್ದರು.