ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಡಿಮೆಯಾಗುತ್ತಿರುವ ಮತದಾನದ ಮಹತ್ವ, ಮೌಲ್ಯ

Mainashree
Updated On : 12 Sept 2013, 10:12 am

ಕ.ಪ್ರ.ವಾರ್ತೆ  ಟಿ.ನರಸೀಪುರ  ಸೆ. 12
ರಾಜಕೀಯ ಕ್ಷೇತ್ರದಲ್ಲಿ ಉತ್ತಮರು ಇಲ್ಲವೆಂದು ಮತದಾರರು ಮತದಾನದಿಂದ ದೂರ ಉಳಿಯುತ್ತಿರುವ ಪರಿಣಾಮ ಮತದಾನ ಮಹತ್ವ ಹಾಗೂ ಮೌಲ್ಯ ಕ್ರಮೇಣವಾಗಿ ಕಡಮೆಯಾಗತೊಡಗಿದೆ ಎಂದು ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಹೇಳಿದರು.
ಇಲ್ಲಿನ ಹಳೇ ಸಂತೇಮಾಳ ಆವರಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಮತದಾನದ ಮೌಲ್ಯ ಹಾಗೂ ಮತದಾರರ ಜವಾಬ್ದಾರಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗಿನ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ಶಿಕ್ಷಣವಂತರಿರುವ ನಗರ ಪ್ರದೇಶಗಳಲ್ಲಿಯೇ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ರಾಜಕೀಯದಲ್ಲಿ ಉತ್ತಮರು ಯಾರು ಇಲ್ಲವೆಂದು ಇವರೆಲ್ಲರೂ ಮತದಾನದಿಂದ ದೂರ ಉಳಿಯುತ್ತಿದ್ದಾರೆ ಎಂದು ವಿಷಾದಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಸ್. ಸುಂದರ್‌ರಾಜ್ ಮಾತನಾಡಿದರು. ಕೊಳ್ಳೇಗಾಲದ ಜೋಗಿ ರಂಗಜೋಳಿಗೆ ಅಧ್ಯಕ್ಷ ಜೆ.ಮೂರ್ತಿ ಮುಡಿಗುಂಡ ಹಾಗೂ ಎಸ್.ಬಿ. ನಾಗರಾಜು ತಂಡ ಜಾನಪದ ಮಾದರಿ ಮೂಲಕ ಮತದಾನದ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಪ್ರಾಂಶುಪಾಲ ಪ್ರೊ.ನಟರಾಜು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಕೆ. ನಾಗರತ್ನಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಬಿಪಿನ್ ನಾಗರಾಜು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement