ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆಮ್ಮಣ್ಣು ತುಂಬಿ ಅಕ್ರಮವಾಗಿ ಮರಳು ಸಾಗಣೆ

Mainashree
Updated On : 12 Sept 2013, 10:08 am

ಕ.ಪ್ರ.ವಾರ್ತೆ  ಟಿ. ನರಸೀಪುರ:  ಸೆ. 12
ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು ಕಾರ್ಯಾಚರಣೆಗಿಳಿದ ಪೊಲೀಸರು, ಮರಳು ಮಾಫಿಯಾದ ಅನ್ಯ ಮಾರ್ಗಗಳು ಪತ್ತೆಯಾದವು. ತಾಲೂಕಿನ ಢಣಾಯಕನಪುರ ಗ್ರಾಮದ ಬಳಿ ಸಿಕ್ಕಿ ಬಿದ್ದ ಟಿಪ್ಪರ್‌ನಲ್ಲಿ ಮರಳಿನ ಮೇಲೆ ಅಡಿಯಷ್ಟು ಕೆಮ್ಮಣ್ಣು ತುಂಬಲಾಗಿತ್ತು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಅವರು ಅಕ್ರಮ ಮರಳು ಸಾಗಾಣಿಕೆಯ ವಿರುದ್ಧ ಕಾರ್ಯಾಚರಣೆ ಆರಂಭಿಸಿ, ಢಣಾಯಕನಪುರ ಬಳಿ ಮೈಸೂರಿಗೆ ತೆರಳುತ್ತಿದ್ದ ಟಿಪ್ಪರ್ ಅನ್ನು ಅನುಮಾನಗೊಂಡು ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದು ಖಚಿತವಾಯಿತು. ಟಿಪ್ಪರ್ ವಶಪಡಿಸಿಕೊಂಡ ಅವರು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಲಾರಿ ವಶ: ತಾಲೂಕಿನ ಕೆಂಡನಕೊಪ್ಪಲು ಗ್ರಾಮದಲ್ಲಿಯೂ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದ ಲಾರಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಳೇ ಸಂತೇಮಾಳದ ಬಳಿ ನದಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದ ಎತ್ತಿನ ಗಾಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಮೂರ್ತಿ, ಪೇದೆಗಳಾದ ಶ್ರೀನಿವಾಸ್, ಜಯಕುಮಾರ್, ಲೋಕೋಪಯೋಗಿ ಇಲಾಖೆಯ ರಾಜೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement