ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ
ಪಿರಿಯಾಪಟ್ಟಣ: ಪಟ್ಟಣದ ದೊಡ್ಡಬೀದಿಯ ವೀರಶೈವ ಸಜ್ಜನ ಸಂಘದ ವತಿಯಿಂದ ಶ್ರೀಕಂಠಿ ತಮ್ಮಯ್ಯ ಸುಬ್ಬಮ್ಮ ಬಸವ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಮೆರವಣಿಗೆ ಮೂಲಕ ವಿಸರ್ಜಿಸಲಾಗಿಯಿತು. ಪಟ್ಟಣದ ದೊಡ್ಡ ಬೀದಿ ಮೂಲಕ ಹೂವಿನ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ನಂದಿ ಧ್ವಜ ಹಾಗೂ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಪಟ್ಟಣದ ದೊಡ್ಡಕೆರೆ ಆವರಣದಲ್ಲಿ ಪಪಂ ವತಿಯಿಂದ ನಿರ್ಮಿಸಿದ್ದ ಗಣೇಶ ವಿಸರ್ಜನಾ ಕೊಳದಲ್ಲಿ ವಿಸರ್ಜಿಸಲಾಯಿತು. ಸಂಘದ ಅಧ್ಯಕ್ಷ ಪಿ.ಬಿ. ಸೋಮಶೇಖರ್, ಕಾರ್ಯದರ್ಶಿ ಕೆ.ಎಂ. ನಂಜುಂಡಸ್ವಾಮಿ, ಸದಸ್ಯರಾದ ಪಿ.ಆರ್. ಶಿವಾನಂದ್, ಪಿ.ಎನ್. ಚಂದ್ರಶೇಖರ್, ಪುಟ್ಟಬುದ್ದಿ, ಪ್ರಸನ್ನ, ಬಿ.ಎನ್. ದಕ್ಷಿಣಾಮೂರ್ತಿ, ನಂಜುಂಡಸ್ವಾಮಿ ಇದ್ದರು.