ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಮಾಲ್ ಬೀಬಿ ದರ್ಗಾಕ್ಕೆ ಖಾದರ್ ಭೇಟಿ

Mainashree
Updated On : 12 Sept 2013, 10:11 am

ಹುಣಸೂರು: ತಾಲೂಕಿನ ರತ್ನಪುರಿಯ ಜಮಾಲ್ ಬೀಬಿ ದರ್ಗಾಕ್ಕೆ ಸಚಿವ ಯು.ಟಿ. ಖಾದರ್ ಕುಟುಂಬ ಸಮೇತ ಭೇಟಿ ನೀಡಿದ್ದರು. ಮಾತಾ ಅಮೃತಾನಂದಮಯಿ ಆಶ್ರಮದ ಕಾರ್ಯಕ್ರಮಕ್ಕೂ ಮುನ್ನ ಸಚಿವರು ತಮ್ಮ ಪತ್ನಿ ಲೆಮಿಸ್ ಖಾದರ್, ಶಾಸಕ ಎಚ್.ಪಿ. ಮಂಜುನಾಥ್, ಜಿಪಂ ಸದಸ್ಯೆ ಡಾ.ಪುಷ್ಪಾವತಿ ಅಮರನಾಥ್ ಅವರೊಂದಿಗೆ ಭೇಟಿ ನೀಡಿ, ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಅಂತೆಯೆ ಗದ್ದಿಗೆಯ ಕೆಂಡಗಣ್ಣ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಮಾಲ್ ಬೀಬಿ ದರ್ಗಾಕ್ಕೆ ಇತಿಹಾಸ ಇರುವ ಬಗ್ಗೆ ತಿಳಿದಿದ್ದೆ. ಇಲ್ಲಿಗೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮತ್ತು ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಸಚಿವರ ಜೊತೆ ಚರ್ಚಿಸಿ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ಸಹಕಾರ ಪಡೆದು ಸೂಕ್ತ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಈ ವೇಳೆ  ಜಮಾಲ್ ಬೀಬಿ ದೇವಾಲಯದ ಮುಖ್ಯಸ್ಥ ಜಾವೀದ್ ವುಲ್ಲಾಜಿ, ತಾಪಂ ಮಾಜಿ ಸದಸ್ಯ ಅಜ್ಗಾರಪಾಷಾ, ಆತವುಲ್ಲಾಜೀ, ಉಮರ್ ಷರೀಪ್, ಮಕ್ತಾರ್, ರಫೀಕ್, ಅನ್ವರ್ ಪಾಷಾ ಮತ್ತು ಮುಖಂಡರಾದ ಹರಿಹರಾನಂದಸ್ವಾಮಿ, ಪುಟ್ಟಸ್ವಾಮಿ, ಪ್ರಸನ್ನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement