ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೈಹಿಕ ಶಿಕ್ಷಣವನ್ನೂ ಗಂಭೀರವಾಗಿ ಪರಿಗಣಿಸಿ

Mainashree
Updated On : 12 Sept 2013, 10:10 am

ಕ.ಪ್ರ.ವಾರ್ತೆ  ಮೈಸೂರು  ಸೆ. 12
ಸಾಂಪ್ರದಾಯಿಕ ಶಿಕ್ಷಣ ನೀಡುವುದರ ಜೊತೆಗೆ ದೈಹಿಕ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಹೇಳಿದರು.
ಮೈಸೂರು ವಿವಿ ಜೆಮ್ನೇಶಿಯಂ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಕಾಲೇಜು ಜಿಮ್ನಾಸ್ಟಿಕ್ಸ್, ಈಜು, ಯೋಗ, ಕುಸ್ತಿ ಭಾರ ಎತ್ತುವ ಹಾಗೂ ಅತ್ಯುತ್ತಮ ದೇಹದಾರ್ಢ್ಯ ಸ್ಪರ್ಧೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ನೀಡುವುದರ ಜೊತೆಗೆ ದೈಹಿಕ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕಾನೂನಿನಂತೆ ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಕ್ರೀಡಾ ಶಿಕ್ಷಣ ನೆರವಾಗುತ್ತದೆ ಎಂದರು.
ಶಿಕ್ಷಣದ ಅರಿವಿನ ಜೊತೆಗೆ ಆರೋಗ್ಯದ ಅರಿವು ಮೂಡುವುದು ಕ್ರೀಡಾ ಶಿಕ್ಷಣದಲ್ಲಿ ಮಾತ್ರ. ಕ್ರೀಡಾ ಶಿಕ್ಷಣದಲ್ಲಿನ ಶಿಸ್ತು, ಸಭ್ಯತೆ, ಗಾಂಭೀರ್ಯ ಕ್ರೀಡಾ ಶಿಕ್ಷಕರು ಮತ್ತು ತರಬೇತುದಾರರ ಶ್ರಮದ ಫಲ. ರಾಜ್ಯ, ಕೇಂದ್ರ ಸರ್ಕಾರಗಳ ಉತ್ತೇಜನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಎಸ್. ಕೃಷ್ಣಕುಮಾರ್ ವಂದಿಸಿದರು. ಬಿ.ಡಿ. ಕಾಂತರಾಜು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement