ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಫ್ಲೈಬಸ್
ಕ.ಪ್ರ.ವಾರ್ತೆ , ಮೈಸೂರು , ಸೆ. 12
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐಷಾರಾಮಿಯಾದ ಫ್ಲೈಬಸ್ ಸೇವೆಯನ್ನು ಇತ್ತೀಚೆಗೆ ಆರಂಭಿಸಿದೆ. ಈ ಫ್ಲೈಬಸ್‌ನಲ್ಲಿ ವಿಮಾನ ಮಾಹಿತಿ, ವೈಯಕ್ತಿಕರಿಸಿದ ಟಿವಿ, ಉಪಾಹಾರ, ಶೌಚಾಲಯ ಮೊದಲಾದ ಸೌಲಭ್ಯಗಳು ಒದಗಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾರುಕಟ್ಟೆ ಮತ್ತು ಪ್ರಯಾಣಿಕರ ಸೇವೆ ಮುಖ್ಯ ವ್ಯವಸ್ಥಾಪಕ ಚನ್ನಬಸಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಫೈಬಸ್ ವೋಲ್ವೋ ಮಲ್ಟಿ ಆಕ್ಸೆಲ್ ಆಗಿದ್ದು, ಪ್ರಯಾಣ ದರ ಒಬ್ಬರಿಗೆ 1000 ನಿಗದಿಪಡಿಸಲಾಗಿದೆ. ಪ್ರಯಾಣ ದರದಲ್ಲೇ ತಿಂಡಿ- ತಿನಿಸು ಲಭ್ಯ. ಜಿಪಿಎಸ್ ಮತ್ತು ವೈಫೈ ಸೇವೆ ಲಭ್ಯವಿದ್ದು, ಬಸ್ಸಿನಲ್ಲಿ 40 ಸೀಟಿನ ವ್ಯವಸ್ಥೆ ಇದೆ. ಈ ಬಸ್ಸು ದಿನಕ್ಕೆ ಎರಡು ಬಾರಿ ಬೆಂಗಳೂರು- ಮೈಸೂರು ನಡುವೆ ತಡೆರಹಿತ ಸಂಚಾರ ಸೇವೆ ಒದಗಿಸುತ್ತಿದೆ ಎಂದು ಅವರು ಹೇಳಿದರು. ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರಯಾಣಿಕರಿಗೆ ಇನ್ಫೋಸಿಸ್ ಹಾಗೂ ವಿವಿಧ ಹೊಟೇಲ್‌ಗಳಿಗೆ ತಲುಪಿಸುವ ಲಿಂಕ್ ಬಸ್ ಸೇವೆ ಸಹ ಒದಗಿಸಲಾಗುತ್ತದೆ. ಒಂದೇ ಕುಟುಂಬದ 5 ಜನ ಮೇಲ್ಪಟ್ಟು ಪ್ರಯಾಣಿಸುವವರಿಗೆ ಶೇ.5 ರಿಯಾಯಿತಿ ನೀಡಲಾಗುತ್ತಿದೆ ಎಂದರು. ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ ಇದ್ದರು.ಫ್ಲೈಬಸ್ ಮುಂಗಡ ಟಿಕೆಟ್ ಕಾಯ್ದಿರಿಸಲು ಡಿಡಿಠ///ಢಿಢಿಢಿ.್ಞಡ್ಠಡ್ಛಿ.್ಝಟಿ ಅಥವಾ ದೂ. 080- 44554422, 99722 13726 ಸಂಪರ್ಕಿಸಬಹುದು.