ಸುದ್ದಿ ಸಂಕ್ಷೇಪ
ಎ.ಸಿ. ಲಲಿತಾಗೆ ಡಾಕ್ಟರೇಟ್
ಮೈಸೂರು: ಡಾ. ವಿಜಯಕುಮಾರಿ ಎಸ್. ಕರಿಕಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎ.ಸಿ. ಲಲಿತಾ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಜಾನಪದ ಅಧ್ಯಯನ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಅಲ್ಜೀಮರ್ ವಿಚಾರ ಸಂಕಿರಣ
ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಪ್ರತಿಷ್ಠಿತ ಅಂಗ ಸಂಸ್ಥೆಯಾದ ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ವಿಶ್ವ ಅಲ್ಜೀಮರ್ ದಿನಾಚರಣೆಯ ಜಾಗೃತಿಗಾಗಿ ಸೆ.14ರ ಬೆಳಗ್ಗೆ 11ಕ್ಕೆ ಕಾಲೇಜು ಸಭಾಂಗಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಉದ್ಘಾಟಿಸುವರು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಮನಶಾಸ್ತ್ರಜ್ಞ ಡಾ.ಸತ್ಯನಾರಾಯಣ ರಾವ್, ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್. ರವಿಶಂಕರ್ ಅತಿಥಿಯಾಗಿ ಆಗಮಿಸುವರು.
ಬ್ಯಾಂಕ್ ಹುದ್ದೆಗೆ ತರಬೇತಿ
ಜ್ಞಾನದೀಪ್ತಿ ಟ್ರಸ್ಟ್ ಐಬಿಪಿಎಸ್ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಕ್ಲರಿಕಲ್ ಮತ್ತು ಪ್ರೊಬೇಷನರಿ ಹುದ್ದೆಗಾಗಿ ತರಬೇತಿ ಆಯೋಜಿಸಿದೆ. 50 ದಿನಗಳ ತರಬೇತಿಗೆ ಆಸಕ್ತರು ನಂ. 10/2, ಎಂ.ಎನ್. ಜೋಯಿಸ್ ರಸ್ತೆ, ಮರಿಮಲ್ಲಪ್ಪ ಕಾಲೇಜು ಎದುರು, ಪ್ರತಿದಿನ ಸಂಜೆ 6 ರಿಂದ 8ರವರೆಗೆ ಸೆ.14ರೊಳಗೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9686072224 ಸಂಪರ್ಕಿಸಬಹುದು.
ಮೊಲೈರ್ ಟುನೈಟ್
ಅಲಯನ್ಸ್ ಫ್ರಾನ್ಸೀಸ್ ಮೈಸೂರು ಘಟಕವು ಸೆ.14ರ ಸಂಜೆ 6.30ಕ್ಕೆ ರಾಣಿಬಹುದ್ದೂರ್ ಸಭಾಂಗಣದಲ್ಲಿ ಮೊಲೈರ್ ಟುನೈಟ್ ನಾಟಕ ಪ್ರದರ್ಶನ ಆಯೋಜಿಸಿದೆ. ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ದೊರಕಲಿದೆ.
ಉಪನ್ಯಾಸ
ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಕರುಣಾಕರಾನಂದಜಿ ಅವರು ದಿವ್ಯಮಾತೆಯ ದಿವ್ಯಪುತ್ರರು ವಿಷಯ ಕುರಿತು ಸೆ.14ರ ಸಂಜೆ 6ಕ್ಕೆ ಉಪನ್ಯಾಸ ನೀಡುವರು.