ಸುದ್ದಿ ಸಂಕ್ಷೇಪ
ರಾಷ್ಟ್ರೀಯ ಸಮ್ಮೇಳನ
ಮೈಸೂರು: ಮೈಸೂರು ವಿವಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆಯ ನೀತಿ ಅಧ್ಯಯನ ಕೇಂದ್ರವು ಐಸಿಎಸ್ಎಸ್ಆರ್ ಪ್ರಾಯೋಜಿತ ಭಾರತದಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಹಾಗೂ ಮೀಸಲಾತಿ, ಹೊಸ ಚರ್ಚೆಗಳು ಎಂಬ ವಿಚಾರ ಕುರಿತು ನ.12 ಮತ್ತು 13ರಂದು ಮೈಸೂರು ವಿವಿ ರಾಷ್ಟ್ರಮಟ್ಟದ ಸಮ್ಮೇಳನ ಏರ್ಪಡಿಸಿದೆ.ದೇಶದ ವಿವಿಧೆಡೆಗಳಿಂದ ವಿಷಯ ತಜ್ಞರು, ಈ ಸಮ್ಮೇಳನಕ್ಕೆ ಆಗಮಿಸುತ್ತಿದ್ದು, ಸಾಮಾಜಿಕ ಹೊರಗುಳಿಯುವಿಕೆ, ಮೀಸಲಾತಿ ನೀತಿಯ ಅವಶ್ಯಕತೆ, ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ವಿಸ್ಕೃತ ಚರ್ಚೆ ನಡೆಯಲಿದೆ. ಆಸಕ್ತ ಸಂಶೋಧಕರು, ಕಾಲೇಜು ಶಿಕ್ಷಕರು ಸಮಾಜ ಶಾಸ್ತ್ರಜ್ಞರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಬಹುದು. ಮೊ. 9481381263, ದೂ. 2419637 ಸಂಪರ್ಕಿಸಬಹುದು.
ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ಮೈಸೂರು: ಮೀಡಿಯಾ ಮಾಹಿತಿ ವತಿಯಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಆಸಕ್ತರು ಕೃಷ್ಣಮೂರ್ತಿಪುರಂನಲ್ಲಿರುವ ಮೀಡಿಯಾ ಮಾಹಿತಿ ಕಚೇರಿಯಲ್ಲಿ ಖುದ್ದಾಗಿ ಬಂದು ಅರ್ಜಿ ಪಡೆಯಬಹದು. ದೂ. 4258487, ಮೊ. 9980959598 ಸಂಪರ್ಕಿಸಿ.
ವಿಚಾರ ಸಂಕಿರಣ
ಮೈಸೂರು: ಪೀಪಲ್ಸ್ ಲೀಗಲ್ ಫೋರಂ (ಪಿಎಲ್ಎಫ್), ರಾಂ ಮನೋಹರ್ ಲೋಹಿಯಾ ಟ್ರಸ್ಟ್ ಮತ್ತು ಪ್ರಥಮ್ ಮೈಸೂರು ಸಂಯುಕ್ತಾಶ್ರಯದಲ್ಲಿ ಸೆ.18 ರಂದು ಕಲಾಮಂದಿರದ ಮನೆಯಂಗಳದಲ್ಲಿ ಶಾಲಾ ಮಕ್ಕಳ ಪುಸ್ತಕಚೀಲದ ಹೊರೆಯನ್ನು ಕಡಿತಗೊಳಿಸುವ ಪರಿಹಾರೋಪಾಯಗಳ ಬಗ್ಗೆ ರಾಜ್ಯಮಟ್ಟದ ವಿಚಾರಸಂಕಿರಣ ನಡೆಯಲಿದೆ. ತಜ್ಞರಿಂದ ಪರಿಣಾಮಕಾರಿ ಮತ್ತು ಸೂಕ್ತ ಪರಿಹಾರೋಪಾಯಗಳನ್ನು ಆಹ್ವಾನಿಸಿದೆ. ಆಸಕ್ತರು ಠಟಜಿ.ಟಣಡ್ಟ್ಠಜಣ್ಜಟಛ್ಝಟ.್ಛ್ಟಟ ಅಥವಾ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಬಹುದು. ಮೊ. 9448576297, ದೂ. 2566484 ಸಂಪರ್ಕಿಸಿ.
ಸದಸ್ಯರ ಆಯ್ಕೆ
ಮೈಸೂರು: ಗುತ್ತಿಗೆದಾರರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸದಸ್ಯರನ್ನು ಆಯ್ಕೆಮಾಡಿದೆ. ಸಂಘದ ಸಾಮಾನ್ಯ ಸ್ಥಾನಕ್ಕೆ ಮಹಾಲಿಂಗಂ, ಗೋವಿಂದೇಗೌಡ, ಎಸ್. ಗೋಪಾಲರಾಜು, ವಿ.ಕುಮಾರ್, ಬಿ. ಪುಟ್ಟಸ್ವಾಮಿ, ಚಂದ್ರಶೇಖರಯ್ಯ, ಎಂ.ಪ್ರತಾಪ್, ಎಂ.ಎಸ್. ರೇವಣ್ಣ, ಸಿ.ಡಿ. ಕೃಷ್ಣ, ಪ.ಜಾತಿ, ಪಂಗಡ ಸ್ಥಾನಕ್ಕೆ ಕೆ.ವಿ. ಚಿನ್ನಯ್ಯ, ಹಿಂದುಳಿದ ವರ್ಗಕ್ಕೆ ಕೆ.ರವಿ, ಮಹಿಳಾ ಮೀಸಲು ಸ್ಥಾನಕ್ಕೆ ಟಿ. ಅನುಸೂಯ, ಜಯಲಕ್ಷ್ಮೀ, ಟಿ. ನರಸೀಪುರ ತಾಲೂಕು ಶಾಖೆಗೆ ಎಚ್.ಎಂ. ಪರಶಿವಮೂರ್ತಿ ಮತ್ತು ರಾಜೇಗೌಡ ಆಯ್ಕೆಯಾಗಿದ್ದಾರೆ.