ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇನ್ನೂ ಜೀತ ಪದ್ಧತಿ ಜೀವಂತ: ಷಡಕ್ಷರಿ ವಿಷಾದ

Mainashree
Updated On : 13 Sept 2013, 11:13 am

ಕ.ಪ್ರ.ವಾರ್ತೆ  ಸಾಲಿಗ್ರಾಮ್ಣ ಸೆ. 13
ಆಧುನಿಕ ದಿನದಲ್ಲೂ ಅಲ್ಲೊಂದು-ಇಲ್ಲೊಂದು ಭಾಗಗಳಲ್ಲಿ ಜೀತಕ್ಕೆ ಇರುವುದನ್ನು ಇಂದಿಗೂ ನಾವು ಕಾಣುತ್ತಿದ್ದೇವೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಷಡಕ್ಷರಿ ಹೇಳಿದರು.
ಕೆ.ಆರ್. ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಜೀತದಾಳುಗಳನ್ನು ಗುರುತಿಸುವ ಸಮೀಕ್ಷೆಯನ್ನು ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿ ಈ ದಿನ ನಡೆಸಲಾದ ಸಮೀಕ್ಷೆಯಲ್ಲಿ ಹತ್ತು ಕಡೆಯಲ್ಲಿ ಜೀತ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಜೀತ ಮಾಡುತ್ತಿರುವ ಜನರನ್ನು ಅದರಿಂದ ಮುಕ್ತಿಗೊಳಿಸಿ, ಅವರಿಗೆ ಪುನರ್‌ವಸತಿ ಕಲ್ಪಿಸಲಾಗುವುದು. ಇಂತಹ ವಿಷಯಗಳ ಬಗ್ಗೆ ಮಾಹಿತಿ ಸಿಕ್ಕರೆ ಯಾವುದೇ ಅಂಜಿಕೆ ಮತ್ತು ಭಯವಿಲ್ಲದೆ ವಿಷಯವನ್ನು ತಿಳಿಸುವುದರ ಮೂಲಕ, ಸರ್ಕಾರವು ಹಮ್ಮಿಕೊಂಡಿರುವ ಪ್ರಮುಖ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಾಲಿಗ್ರಾಮ, ಕಾಳಮ್ಮನಕೊಪ್ಪಲು, ಗಾಯನಹಳ್ಳಿ, ಹೊನ್ನೇನಹಳ್ಳಿ ಗ್ರಾಮಗಳಲ್ಲಿ ತಲಾ ಒಂದು, ಮಾವನೂರು ಗ್ರಾಮದಲ್ಲಿ ಎರಡು ಹಾಗೂ ಕೆಡಗ ಗ್ರಾಮದಲ್ಲಿ ನಾಲ್ಕು ಪ್ರಕರಣಗಳು ಕಂಡುಬಂದಿವೆ.
ಈ ಸಮೀಕ್ಷಾ ಕಾರ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗೀತಾ ಡೆಂಗ್ರೋಜಿ, ಗ್ರಾಮ ಲೆಕ್ಕಾಧಿಕಾರಿಗಳಾದ ಬಿ.ತಿಮ್ಮಯ್ಯ, ಕೆ.ಎನ್. ರಾಮಯ್ಯ ಹಾಗೂ ದಸಂಸ ಹೋಬಳಿ ಸಂಘಟನಾ ಸಂಚಾಲಕ ಪುರಿ ಗೋವಿಂದರಾಜು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement