ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಕುಸ್ತಿ ನಡೆಸುವಾಗ ನಿಯಮ ಉಲ್ಲಂಘನೆ'

Mainashree
Updated On : 13 Sept 2013, 11:18 am

ದಸರಾ ಮಹೋತ್ಸವದಲ್ಲಿ ಕುಸ್ತಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ರಾಜರು ಈ ಕ್ರೀಡೆಯನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ದಸರಾ ಮಹೋತ್ಸವದಲ್ಲಿ ನಡೆಸುವ ಕ್ರೀಡಾ ಸ್ಪರ್ಧೆಯಲ್ಲಿ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಕುಸ್ತಿಪಟುಗಳ ಜೀವದ ಜತೆ ಆಟವಾಡಲಾಗುತ್ತಿದೆ ಎಂದು ಶ್ರೀ ಜಯಚಾಮರಾಜೇಂದ್ರ ಗರಡಿ ಸಂಘದ ಅಧ್ಯಕ್ಷ ಪೈ.ಮಹದೇವ ಆರೋಪಿಸಿದರು. ದಸರಾ ಉಪಸಮಿತಿಗೆ ನೇಮಕವಾಗುವ ಅಧಿಕಾರಿಗಳು ತಮಗಿಷ್ಟದಂತೆ ನಡೆಸುತ್ತಾರೆ. ಮೊದಲ ನಾಲ್ಕು ಹಂತದಲ್ಲಿ ನಿಯಮಗಳನ್ನು ಪಾಲಿಸುತ್ತಾರೆ. ಅದೇ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಮಾರ್ಪಿಟ್ಟಿನ ಹೆಸರಿ ನಲ್ಲಿ ಕುಸ್ತಿಪಟುಗಳ ಜೀವದ ಜತೆ ಆಟವಾಡುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಭಾಗವಹಿಸುವವರಂತೂ ಡ್ರಗ್ಸ್ ತೆಗೆದುಕೊಂಡು ಬರುವ ಪರಿಪಾಠವಾಗಿದೆ ಎಂದರು. ಕೆಲವರು ಹಣಕ್ಕೆ ಭಾಗವಹಿಸುತ್ತಾರೆ. ಅದರಿಂದ ಉಪಸಮಿತಿಗೆ ನೀಡುವ ಹಣ ಹೆಚ್ಚು ಅಪವ್ಯಯವಾಗುತ್ತದೆ. ಕೆಲವರು ಹಾಜರಾತಿಗೆ ಸಹಿ ಹಾಕದೆ ಪ್ರಯಾಣ ಭತ್ಯೆ ಪಡೆಯುತ್ತಾರೆ. ಒಂದು ರೀತಿಯಲ್ಲಿ ಉಪಸಮಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತೆ. ಈವರೆಗೂ ಸರ್ಕಾರಕ್ಕೆ ಖರ್ಚು ವೆಚ್ಚವನ್ನು ನೀಡಲು ಉಪಸಮಿತಿ ವಿಫಲವಾಗಿದೆ. ಹಾಗೆ ಮೈಸೂರಿನಲ್ಲಿ ಗರಡಿ ಮನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಿ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು. ಹಗರಣಗಳು ನಡೆಯದಂತೆ ಎಚ್ಚರವಹಿಸಬೇಕು. ಕುಸ್ತಿಗೆ ತರಬೇತುದಾರರನ್ನು ನೇಮಿಸುವಂತೆ ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement