ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೆಲೆ ನಿಗದಿ ಜವಾಬ್ದಾರಿ ಕಬ್ಬು ನಿಯಂತ್ರಣ ಮಂಡಳಿಗೆ

Mainashree
Updated On : 13 Sept 2013, 11:11 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ಕಬ್ಬಿನ ಬೆಲೆ ನಿಗದಿಪಡಿಸುವ ಸಂಬಂಧ ಕಬ್ಬು ನಿಯಂತ್ರಣ ಮಂಡಳಿ ಸಭೆ ಕರೆಯುವಂತೆ ಸರ್ಕಾರವನ್ನು ಕೋರಲು ಶುಕ್ರವಾರ ಕಬ್ಬು ಬೆಳೆಗಾರರ ಸಭೆ ತೀರ್ಮಾನಿಸಿತು.
ಕಬ್ಬಿನ ಬೆಲೆ ನಿಗದಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕಬ್ಬು ನಿಯಂತ್ರಣ ಅಧಿನಿಯಮ 2013 ಜಾರಿಗೊಳಿಸಿದ್ದು, ಈ ಕಾಯ್ದೆಯಡಿ ಕಬ್ಬು ನಿಯಂತ್ರಣ ಮಂಡಳಿ ರಚಿಸಲಾಗಿದ್ದು, ಕಬ್ಬಿನ ಬೆಲೆ ನಿರ್ಧರಿಸಲು ಕೂಡಲೆ ಕಬ್ಬು ನಿಯಂತ್ರಣ ಮಂಡಳಿ ಸಭೆ ಕರೆಯುವಂತೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು.
ಬಣ್ಣಾರಿ ಕಾರ್ಖಾನೆಯಿಂದ ರೈತರಿಗೆ ಬರಬೇಕಿದ್ದ 2011-12 ಹಾಗೂ 2012-13ನೇ ಸಾಲಿನ ಬಾಕಿ ಹಣದ ಬಗ್ಗೆ ಈ ತಿಂಗಳ ಅಂತ್ಯದ ವೇಳೆಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಸಭೆ ತೀರ್ಮಾನಿಸಿದೆ. ಈ ಸಂಬಂಧ ಅಗತ್ಯಬಿದ್ದರೆ ಮುಖ್ಯಮಂತ್ರಿಗಳ ಜತೆಯೂ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಮತ್ತು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
2013-14ನೇ ಸಾಲಿಗೆ ಕಬ್ಬಿನ ಬೆಲೆ ನಿಗದಿಪಡಿಸುವಂತೆ ಕಬ್ಬು ನಿಯಂತ್ರಣ ಮಂಡಳಿಯನ್ನು ಕೋರಲು ತೀರ್ಮಾನಿಸಲಾಯಿತು. ರೈತರು ಬೆಳೆದ ಬಿಳಿ ಕಬ್ಬು ಸೇರಿದಂತೆ ಎಲ್ಲಾ ತಳಿಯ ಕಬ್ಬುಗಳನ್ನು ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಖರೀದಿಸಬೇಕು ಎಂದು ಕಾರ್ಖಾನೆ ಆಡಳಿತ ಮಂಡಳಿಗೆ ಸೂಚಿಸಲಾಯಿತು. ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಮಾಸಾಂತ್ಯಕ್ಕೆ ಕಬ್ಬು ನಿಯಂತ್ರಣ ಮಂಡಳಿ ಸಭೆ ಕರೆಯುವಂತೆ ತೀರ್ಮಾನಿಸಲಾಯಿತು.
ಆದರೆ ಕಬ್ಬು ಬೆಳೆಗಾರರು 2011-12ನೇ ಸಾಲಿಗೆ ಬಾಕಿ 500, 2012-13ನೇ ಸಾಲಿಗೆ 600 ಬಾಕಿ ಕೊಡಿಸಬೇಕು, ಸಕ್ಕರೆ ಇಳುವರಿ ಬಣ್ಣಾರಿ ಕಾರ್ಖಾನೆಯಲ್ಲಿ ಹೆಚ್ಚಿರುವುದರಿಂದ ಹೆಚ್ಚಿನ ಮುಂಗಡ ಹಣ ನೀಡಬೇಕು, ಮೈಷುಗರ್ಸ್ ಕಾರ್ಖಾನೆ ರೋಗಗ್ರಸ್ಥವಾದ್ದರಿಂದ ಅಲ್ಲಿನ ಇಳುವರಿ ಕಡಿಮೆ ಇದೆ. ಆದ್ದರಿಂದ ಬಣ್ಣಾರಿ ಕಾರ್ಖಾನೆಗೂ, ಮೈಷುಗರ್ಸ್ ಕಾರ್ಖಾನೆಗೂ ಹೋಲಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಕಬ್ಬು ಅಭಿವೃದ್ಧಿ ಮಂಡಲಿ ಆಯುಕ್ತ ಎಸ್.ಎಸ್. ಪಟ್ಟಣ ಶೆಟ್ಟಿ, ಜಿಲ್ಲಾಧಿಕಾರಿ ಸಿ. ಶಿಖಾ, ಎಸ್ಪಿ ಅಭಿನವ್ ಖರೆ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಕೂಡನಹಳ್ಳಿ ರಾಜಣ್ಣ, ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement