ಮಹಿಳೆ ಸೇರಿ ಮೂವರ ನಾಪತ್ತೆ
ಕ.ಪ್ರ.ವಾರ್ತೆ ಮೈಸೂರು ಸೆ. 13
ಮೂರು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆ ಸೇರಿ ಮೂವರು ಮಂದಿ ನಾಪತ್ತೆಯಾಗಿದ್ದಾರೆ.
ರಸ್ತೆ ಬದಿ ವ್ಯಾಪಾರಿ ರವಿ (33) ನಾಪತ್ತೆಯಾಗಿದ್ದಾರೆ. ಗೋದಿ ಮೈ ಬಣ್ಣ, ಗುಂಡುಮುಖ, ದೃಢಕಾಯ ಹೊಂದಿರುವ ರವಿ 5.6 ಅಡಿ ಎತ್ತರವಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಈ ಸಂಬಂಧ ಅವರ ಪತ್ನಿ ರೇಣುಕ ಕೆ.ಆರ್. ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರ ಸುಳಿವು ದೊರೆತಲ್ಲಿ ದೂ. 2418319 ಅಥವಾ 2418519 ಸಂಪರ್ಕಿಸಿ.
ಮತ್ತೊಂದು ಪ್ರಕರಣದಲ್ಲಿ ತಮಗೆ ಬೇಜಾರಾಗಿರುವುದರಿಂದ ಮನೆಬಿಟ್ಟು ತೆರಳುತ್ತಿರುವುದಾಗಿ ದೂರವಾಣಿ ಮೂಲಕ ತನ್ನ ತಂದೆಗೆ ತಿಳಿಸಿ ಹೀನಾ ಕೌಸರ್ (29) ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. 5.6 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ದೂ. 2418309 ಸಂಪರ್ಕಿಸಿ.
ತಾಲೂಕಿನ ಮಾರ್ಬಳ್ಳಿಹುಂಡಿ ನಿವಾಸಿ ಮಹದೇವು ನಾಪತ್ತೆಯಾಗಿದ್ದಾರೆ. ಸುಮಾರು 5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಎಣ್ಣೆಗೆಂಪು ಬಣ್ಣ ಇರುವ ಮಹದೇವು ಕನ್ನಡ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ಜಯಪುರ ಠಾಣೆ ದೂ. 2595781 ಸಂಪರ್ಕಿಸಬಹುದು.