ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದೇಶಿ ವಿದ್ಯಾರ್ಥಿಗಳ ಸೆಳೆಯುವಲ್ಲಿ ಮೈಸೂರು ವಿವಿ ಸಫಲ: ಪ್ರೊ.ರಂಗಪ್ಪ

Mainashree
Updated On : 13 Sept 2013, 11:17 am

ಕ.ಪ್ರ.ವಾರ್ತೆ  ಮೈಸೂರು  ಸೆ. 13
ಮೈಸೂರು ವಿವಿಯು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಮೈಸೂರು ವಿವಿಯ ಅಂತಾರಾಷ್ಟ್ರೀಯ ಕೇಂದ್ರ ಹಾಗೂ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನನ್ನ ದೇಶ - ನನ್ನ ಜನ ಎಂಬ ಸರಣಿ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಅತ್ಯಂತ ಹಿರಿಯ ವಿವಿಯೆಂಬ ಹೆಗ್ಗಳಿಕೆ ಹೊಂದಿರುವ ಮೈಸೂರು ವಿವಿಯು ವಿಶ್ವ ಮಟ್ಟದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ. ಕಳೆದ ಅನೇಕ ವರ್ಷಗಳಿಂದ ಜಗತ್ತಿನ ನಾನಾ ಭಾಗದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕಾಗಿ ಬರುತ್ತಿದ್ದು, ಪ್ರಸ್ತುತ ಇಲ್ಲಿನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 1200 ಮಂದಿ ವಿದ್ಯಾರ್ಥಿಗಳಿದ್ದಾರೆ. ಇತ್ತೀಚೆಗೆ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ ಎಂದರು.
ಒಂದೊಂದು ದೇಶಕ್ಕೂ ತನ್ನದೇ ಆದ ಭೌಗೋಳಿಕ ಸಂಪತ್ತು, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಹೊಂದಿರುತ್ತವೆ. ಬಹುಸಂಸ್ಕೃತಿ ಅರಿಯಲು ಹಾಗೂ ದೇಶಗಳ ನಡುವಿನ ಸೌಹಾರ್ದತೆಗೆ ಇಂತಹ ಸಂಸ್ಕೃತಿಯ ಪರಿಚಯಾತ್ಮಕ ಕಾರ್ಯಕ್ರಮಗಳು ಸಹಾಯಕವಾಗಲಿದೆ ಎಂದು ತಿಳಿಸಿದರು.
ನಮೀಬಿಯಾ ಹಾಗೂ ತಾನ್ಜೇನಿಯಾ ರಾಷ್ಟ್ರಗಳ ಜತೆಗೆ ಭಾರತವು ಉತ್ತಮ ಭಾಂದವ್ಯ ಹೊಂದಿದೆ. ಜಗತ್ತು ಒಂದು ಪುಟ್ಟ ಹಳ್ಳಿಯಂತಾಗಿರುವ ಇಂತಹ ಸಂದರ್ಭದಲ್ಲಿ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಹಾಗೂ ಅದರ ಮಾಹಿತಿ ತಿಳಿಯುವುದು ಅವಶ್ಯಕ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕಿ ಪ್ರೊ.ಆರ್. ಇಂದಿರಾ, ಮೈಸೂರು ವಿವಿಯಲ್ಲಿ ಸುಮಾರು 50 ದೇಶಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪ್ರತಿ ತಿಂಗಳು ಈ ಕಾರ್ಯಕ್ರಮದ ಮೂಲಕ 2- 3 ದೇಶಗಳ ಇತಿಹಾಸ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವಿದೆ ಎಂದರು.
ಡಾ. ನಿರಂಜನ ವಾನಳ್ಳಿ ಇದ್ದರು. ನಂತರ ನಮೀಬಿಯಾ ದೇಶದ ಬೆನ್ಜುಮಿನ್ ಹಾಗೂ ತಾನ್ಜೇನಿಯಾದ ಮರಿಯಾ ತಮ್ಮ ದೇಶಗಳ ಇತಿಹಾಸ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement