ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

20ರಂದು ಗೋಂಧಳಿ ಸಮಾಜದ ಬಹಿರಂಗ ವಿಚಾರಣೆ

Mainashree
Updated On : 14 Sept 2013, 11:05 am

ಕ.ಪ್ರ.ವಾರ್ತೆ  ಮೈಸೂರು  ಸೆ. 14
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.20ರ ಬೆಳಗ್ಗೆ 11ಕ್ಕೆ ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಗೋಂಧಳಿ ಸಮಾಜದ ಬಹಿರಂಗ ವಿಚಾರಣೆ ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೋಂಧಿಲ, ಬುಡುಬುಡುಕೆ, ಜೋಷಿ, ವಾಸುದೇವ ಜಾತಿಗಳ ಜನರು ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕು. ಬುಡುಬುಡುಕೆ ಜಾತಿಯನ್ನು ಕೀಳಾಗಿ ಕಾಣುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅನೇಕರು ಜಾತಿ ಕಾಲಂನಲ್ಲಿ ಬುಡುಬುಡುಕೆ ಬದಲು ಮರಾಠಾ ಅಥವಾ ಮರಾಠಿ ಎಂದು ಬರೆಯಲಾಗುತ್ತಿದೆ. ಇದರ ಸ್ಪಷ್ಟನೆಗೆ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಸಲಹಾ ಸಮಿತಿ ಅಧ್ಯಕ್ಷ ಕೆ.ಎಂ. ಜಯರಾಮಯ್ಯ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement