ರೈತ ಸಂಜೀವಿನಿ ಯೋಜನೆಯಲ್ಲಿ ನೆರವು
ಕ.ಪ್ರ.ವಾರ್ತೆ ಹುಣಸೂರು ಸೆ. 14
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ತಾಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿಯ ಅಕ್ಕಪ್ಪನಾಯಕರವ ಪತ್ನಿ ಚಾಮಮ್ಮ ಅವರಿಗೆ ಹಾವು ಕಚ್ಚಿ ಮೃತಪಟ್ಟ ಹಿನ್ನೆಲೆ ಅಕ್ಕಪ್ಪನಾಯಕ ಅವರಿಗೆ ರೈತ ಸಂಜೀವಿನಿ ಯೋಜನೆಯಡಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿದ 50 ಸಾವಿರ ಚೆಕ್ ಅನ್ನು ಸಮಿತಿ ಅಧ್ಯಕ್ಷ ಈರಣ್ಣ ವಿತರಿಸಿದರು. ಎಪಿಎಂಸಿ ಸಮಿತಿ ಸದಸ್ಯರಾದ ಸುರೇಶ್, ದೇವರಾಜು, ರವಿಗೌಡ, ಕಾರ್ಯದರ್ಶಿ ಸುರೇಶ್‌ಬಾಬು, ದಯಾನಂದ, ಸೋಮಶೇಖರ್, ಚಲುವರಾಜು, ಮಹಮ್ಮದ್ ಅಲ್ಲಮಾ ಇಕ್ಬಾಲ್ ಇದ್ದರು.