ಶಶಿಕಲಾ ನಾರಾಯಣ್ ಆಯ್ಕೆ
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಸೆ. 14
ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಮಹಿಳಾ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಜೆ. ಶಶಿಕಲಾ ನಾರಾಯಣ್ ಅವಿರೋಧವಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಶನಿವಾರ 2013-14ನೇ ಸಾಲಿನ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಮಲಾ ಅರುಣ್ರಾಜ್, ಪೂರ್ಣಿಮಾ ಹರೀಶ್ ಹಾಗೂ ಎಸ್.ಜೆ. ಶಶಿಕಲಾ ನಾರಾಯಣ್ ನಾಮಪತ್ರ ಸಲ್ಲಿಸಿದ್ದು, ನಂತರ ಕಮಲಾ ಮತ್ತು ಪೂರ್ಣಿಮಾ ನಾಮಪತ್ರಗಳನ್ನು ವಾಪಸ್ ಪಡೆದಿದ್ದರಿಂದ ಎಸ್.ಜೆ.ಶಶಿಕಲಾ ನಾರಾಯಣ್ ಅವಿರೋಧ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಚ್.ವಿಜಯ ಸತ್ಯನಾರಾಯಣಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು. ಈ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಸಣ್ಣೇಗೌಡ ಕಾರ್ಯ ನಿರ್ವಹಿಸಿದರು. ನಿವೃತ್ತ ಉಪನ್ಯಾಸಕ ಎಸ್.ಆರ್.ರಾಮೇಗೌಡ, ಸಂಘದ ನಿರ್ದೇಶಕರಾದ ಯಶೋಧಾ ರಮೇಶ್, ಎಸ್.ಎಸ್.ಗೀತಾ ಆದಿಶೇಷ, ಎಸ್.ಎಸ್.ಜ್ಯೋತಿ ಹರೀಶ್, ಹೇಮಲತಾ ಜಿನೇಶ್, ಕಮಲಾ ಅರುಣ್ರಾಜ್, ಸುಚಿತ್ರಾ ನಾಗಚಂದ್ರ ಇದ್ದರು.