ಸುದ್ದಿ ಸಂಕ್ಷೇಪ
ದೂರು ನಿರ್ವಹಣಾ ಕೇಂದ್ರ
ಮೈಸೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಾರ್ವಜನಿಕ ದೂರು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಆಹಾರ ಇಲಾಖೆಗೆ ಸಂಬಂಧಿಸಿದಂತೆ ದೂರುಗಳಿದ್ದರೆ, ಕಚೇರಿ ವೇಳೆಯಲ್ಲಿ ಸಲ್ಲಿಸಬಹುದು. ದೂ. 2422107.
ದಸರಾ ಸಂಚಿಕೆಗೆ ಲೇಖನಗಳ ಆಹ್ವಾನ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತವು ದಸರಾ ನೆನಪಿನ ಸಂಚಿಕೆ ಹೊರತರಲು ಉದ್ದೇಶಿಸಿದ್ದು, ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಿದೆ. ಪರಂಪರಾಗತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಾ, ಆಚರಿಸುತ್ತಾ ಬಂದಿರುವ ನಾಗರಿಕರು ಭಾರತದ ವಿವಿಧ ರಾಜ್ಯಗಳ ನವರಾತ್ರಿ ಆಚರಣೆ, ಕರ್ನಾಟಕದ ವಿವಿಧ ಪ್ರದೇಶಗಳ ನವರಾತ್ರಿ ಆಚರಣೆ ಹಾಗೂ ಮೈಸೂರಿನ ದಸರಾ ಆಚರಣೆ ಕುರಿತ ಲೇಖನ ಕಳುಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ. ಆಸಕ್ತರು 2000 ಪದಗಳ ಮಿತಿಯಲ್ಲಿ ನುಡಿ ಅಕ್ಷರದಲ್ಲಿ ಬೆರಳಚ್ಚು ಮಾಡಿಸಿ ಡ್ಟ್ಡಢಜಟ್ಝ್ಠಿ.ಜಛಡಛ್ಠಛಣ್ಜಟಛ್ಝಟ.್ಛ್ಟಟ ಗೆ ಮೇಲ್ ಮಾಡಬಹುದು. ಅಥವಾ ಜೆರಾಕ್ಸ್ ಪ್ರತಿಯನ್ನು ಡಾ. ಎನ್.ಕೆ.ಲೋಲಾಕ್ಷಿ, ಸಹಾಯಕ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ, ಮಾನಸಗಂಗೋತ್ರಿ, ಮೈಸೂರು ಇವರಿಗೆ ಸೆ. 20ರೊಳಗೆ ಕಳುಹಿಸಿಕೊಡುವಂತೆ ಕೋರಲಾಗಿದೆ.
ಅಧಿಕಾರ ಸ್ವೀಕಾರ
ಮೈಸೂರು: ಜಂಟಿ ಕೃಷಿ ನಿರ್ದೇಶಕರಾಗಿ ಎಂ. ಮಹಂತೇಶಪ್ಪ ಸೆ.4ರಂದು ಅಧಿಕಾರ ವಹಿಸಿಕೊಂಡರು.