ಹಿಂದಿ ದಿನಾಚರಣೆ ವಿರುದ್ಧ ಕರವೇ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 14
ರಾಜ್ಯದಲ್ಲಿ ಹಿಂದಿ ದಿನಾಚರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶನಿವಾರ ಪ್ರತಿಭಟಿಸಿದರು. ಕೇಂದ್ರ ಸರ್ಕಾರವು ಹಿಂದಿ ದಿನಾಚರಣೆ ನೆಪದಲ್ಲಿ ಕರ್ನಾಟಕದ ಜನರ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡುತ್ತಿರುವುದು ಖಂಡನಿಯ. ಹಿಂದಿ ರಾಷ್ಟ್ರಭಾಷೆ ಎಂಬುದುಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರ ಸ್ಥಾನ ಎಂದರು. ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ಕುಮಾರ್, ನಗರಾಧ್ಯಕ್ಷ ಎಂ.ಜೆ.ಕಿರಣ್ಗೌಡ, ಮುಖಂಡರಾದ ರಾಮೇಗೌಡ, ಗಾಯತ್ರಿ, ಆನಂದ್, ಮೊಸಿನ್, ಜಾಫರ್, ಅಯೂಬ್, ಅರುಣ್, ಹೇಮಂತ್, ಗುರುದತ್, ಜಗದೀಶ್, ವಿಜಯಮ್ಮ, ಲೋಕೇಶ್, ವಾಜಿದ್, ಫೈರೋಜ್, ರಫೀಕ್, ಸುನಂದ ಇದ್ದರು.