ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಂಜಿನಿಯರ್‌ಗಳ ಜ್ಞಾನ ಆಡಳಿತದಲ್ಲಿ ಬಳಕೆ

Mainashree
Updated On : 15 Sept 2013, 10:54 am

ಕ.ಪ್ರ.ವಾರ್ತೆ  ಮೈಸೂರು  ಸೆ. 15
ದೇಶದ ನಿರ್ಮಾತೃಗಳಾದ ಎಂಜಿನಿಯರ್‌ಗಳ ಅನುವವ ಮತ್ತು ಜ್ಞಾನವನ್ನು ಆಡಳಿತದಲ್ಲಿ ಬಳಸಿಕೊಳ್ಳಬೇಕು ಎಂದು ಸಂಸದ ಎಚ್. ವಿಶ್ವನಾಥ್ ಸಲಹೆ ನೀಡಿದರು.
ನಗರದ ಎಂಜಿನಿಯರ್‌ಗಳ ಸಂಸ್ಥೆಯು ಭಾನುವಾರ ಏರ್ಪಡಿಸಿದ್ದ 46ನೇ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯನವರ ಜ್ಞಾನವನ್ನು ಕೃಷ್ಣರಾಜ ಒಡೆಯರ್ ಅವರು ಬಳಿಸಿಕೊಂಡಿದ್ದರಿಂದ ಅವರ ಪ್ರತಿಭೆ ಮತ್ತು ಅನುಭವ ಇಡೀ ವಿಶ್ವಕ್ಕೆ ತಿಳಿಯಿತು. ಅಂತೆಯೇ ನಿಮ್ಮೆಲ್ಲರ ಅನುಭವವನ್ನು ಆಡಳಿತದಲ್ಲಿ ಬಳಸಿಕೊಳ್ಳಬೇಕು ಎಂದರು.
ಎಂಜಿನಿಯರಿಂಗ್ ಹುದ್ದೆ ದುಡ್ಡು ಮಾಡುವ ಕೆಲಸ ಎಂದು ಜನ ಭಾವಿಸಿದ್ದಾರೆ. ಆದರೆ ಆ ಇಲಾಖೆಯಲ್ಲಿನ ಜ್ಞಾನ ಸತ್ತು ಹೋಗುತ್ತಿದೆ. ಈ ವ್ಯವಸ್ಥೆ ಸರಿಯಾಗಬೇಕು. ಆಡಳಿತದಲ್ಲಿ ಎಂಜಿನಿಯರ್‌ಗಳ ಜ್ಞಾನ ಬಳಸಿಕೊಳ್ಳಬೇಕು. ಅವರಿಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ನೀಡಬೇಕು. ರಾಜ್ಯೋತ್ಸವ ಪ್ರಶಸ್ತಿ ವೇಳೆ ಎಂಜಿನಿಯರ್‌ಗಳ ಸೇವೆ ಪರಿಗಣಿಸಬೇಕು. 2009ರಲ್ಲಿ ಕೇಂದ್ರ ಸರ್ಕಾರ ಮೈಸೂರು ವಿವಿಗೆ 100 ಕೋಟಿ ಅನುದಾನ ನೀಡಿತ್ತು. ವಿವಿ ಎದುರು ವಿಶ್ವೇಶ್ವರಯ್ಯ ಮತ್ತು ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪಿಸಬೇಕು ಹಾಗೂ ವಿಶ್ವೇಶ್ವರಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬ ಉದ್ದೇಶ ಇತ್ತು. ಆದರೆ ಯಾವುದೂ ಈಡೇರಿಲ್ಲ. ಆದ್ದರಿಂದ ಈ ಸಂಬಂಧ ಕುಲಪತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ನಗರದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಿದೆ. ವಿಮಾನ ನಿಲ್ದಾಣ ಅಭಿವೃದ್ಧಿಗೆ 130 ಕೋಟಿ ನೀಡಿತ್ತು. ಆದರೆ ಈ ಹಿಂದಿನ ರಾಜ್ಯ ಸರ್ಕಾರ ಆ ಹಣವನ್ನು ಹಿಂದಕ್ಕೆ ಕಳುಹಿಸಿದೆ ಎಂದು ದೂರಿದರು.
ಎಂಜಿನಿಯರುಗಳಾದ ಗೋಪಿನಾಥ್, ವಿಜಯ ರಾಘವನ್, ಸುಬ್ರಹ್ಮಣ್ಯ, ಮಹದೇವಸ್ವಾಮಿ, ರಾಜಗೋಪಾಲ್, ರವೀಂದ್ರನಾಥ್, ಸೈಯದ್ ಅಮಾನುಲ್ಲಾ, ಎಂ.ಸುರೇಶ್ ಸೇರಿದಂತೆ 12 ಮಂದಿಯನ್ನು ಸನ್ಮಾನಿಸಲಾಯಿತು. ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ, ಕಾರ್ಯದರ್ಶಿ ಪಿ. ಸಂಪತ್ತು, ಜಂಟಿ ಕಾರ್ಯದರ್ಶಿ ಬಿ.ವಿ.ರವೀಂದ್ರನಾಥ್, ಸಂಚಾಲಕ ಕೆ.ಬಿ. ಭಾಸ್ಕರ್, ಪರಿಷತ್ ಸದಸ್ಯ ಎ.ಎಸ್. ಸತೀಶ್, ಎಂ. ಲಕ್ಷ್ಮಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement