ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಬಡ ಬ್ರಾಹ್ಮಣರಿಗೆ ಮೀಸಲಾತಿ ಬೇಕು '

Mainashree
Updated On : 15 Sept 2013, 10:53 am

ಮೈಸೂರು: ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರ ಏಳ್ಗೆಗೆ ಮೀಸಲಾತಿ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ ಹಾಗೂ ಎಸ್‌ಕೆಬಿ ವಿದ್ಯಾಸಹಾಯ ಸಂಘವು ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಂದು ಎಲ್ಲ ಜಾತಿಗಳು ಮೀಸಲಾತಿ ಪಡೆದುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ನಮ್ಮ ಸಮಾಜದಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರಿಗಾಗಿ ಸಹಾಯ ಮಾಡುವ ಬಗ್ಗೆ ಸರ್ಕಾರದ ಜತೆ ಮಾತನಾಡಿದ್ದೇನೆ ಎಂದರು.
ಬ್ರಾಹ್ಮಣ ಸಮಾಜದಲ್ಲಿ ಅತಿ ಹಿಂದುಳಿದ ಯುವಕರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಅದರಲ್ಲೂ ಶೈಕ್ಷಣಿಕ ವಿಚಾರದಲ್ಲಿ ಹೆಚ್ಚು ಸಾಧಿಸಬೇಕು. ಅತಿ ಕಡಿಮೆ ಜನಸಂಖ್ಯೆಯುಳ್ಳ ಸಮುದಾಯದಿಂದ ಬಂದ ನಮ್ಮ ತಂದೆ ಈ ರಾಜ್ಯದ ಮುಖ್ಯಮಂತ್ರಿಯಾದರು. ಅವರ ಪ್ರತಿಭೆ, ವೈಯಕ್ತಿಕ ವರ್ಚಿಸ್ಸಿನಿಂದಲೇ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆದರು. ಇಡಿ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜಾಣ್ಮೆ ಅವರಲ್ಲಿತ್ತು. ಬ್ರಾಹ್ಮಣರು ಒಂದು ಉನ್ನತ ಸ್ಥಾನಕ್ಕೆ ಹೋದರೆ ಎಲ್ಲರಿಗೂ ನ್ಯಾಯ ಕೊಡಿಸಲು ಶ್ರಮಿಸುತ್ತಾರೆ ಎಂಬುದುಕ್ಕೆ ಅವರೇ ಉದಾಹರಣೆ ಎಂದರು.
ನಾನೂ ನೂರಕ್ಕೆ ನೂರರಷ್ಟು ಕ್ಲೀನ್ ಅಲ್ಲ
ನಮ್ಮ ಸಮಾಜದಿಂದ ನನ್ನನ್ನು ಅಭಿನಂದಿಸಿದ್ದೀರಿ. ಹಾಗೆ ಸಮಾಜಕ್ಕೆ ಆಗಬೇಕಾದ ಕೆಲಸಗಳ ಬಗ್ಗೆಯೂ ತಿಳಿಸಿದ್ದೀರಿ. ನಾನು ಬ್ರಾಹ್ಮಣರ ಪರ ವಕಾಲತ್ತು ವಹಿಸುತ್ತೇನೆ. ಸಮಾಜದ ಏಳ್ಗೆಗಾಗಿ ದುಡಿಯುತ್ತೇನೆ. ನನ್ನನ್ನು ಎಲ್ಲರೂ 'ಮಿಸ್ಟರ್ ಕ್ಲೀನ್‌' ಎನ್ನುತ್ತಾರೆ. ನಾನೂ ನೂರಕ್ಕೆ ನೂರರಷ್ಟು ಕ್ಲೀನ್ ಇಲ್ಲ. ಆ ರೀತಿ ಇದ್ದಿದ್ದರೆ ಚುನಾವಣೆಯಲ್ಲಿ ಗೆಲ್ಲಲೂ ಆಗುತ್ತಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement