ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಗೆಲುವಿಗೆ ಹೋರಾಟ: ಗಿರೀಶ್

Mainashree
Updated On : 15 Sept 2013, 11:19 am

ಕ.ಪ್ರ.ವಾರ್ತೆ  ಎಚ್.ಡಿ.ಕೋಟೆ  ಸೆ. 15
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರ ಶ್ರಮವಹಿಸಿ ದುಡಿಯುವುದಾಗಿ ತಾಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಹೇಳಿದರು.
ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಘಟಕದಲ್ಲಿರುವ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡು ಪಕ್ಷದ ಪರ ದುಡಿದು ಅತಿ ಹೆಚ್ಚು ಮತ ಲಭಿಸುವಂತೆ ಶ್ರಮವಹಿಸಲಾಗುವುದು ಎಂದರು.
ವೀರಶೈವ ಸಮಾಜದ ಯುವ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು.
ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಯೋಗೇಶ್ಕುಮಾರ್, ಪದಾಧಿಕಾರಿಗಳಾದ ಪುಟ್ಟರಾಜು, ನಂದೀಶ್, ಪುಟ್ಟೇಗೌಡ, ಸತ್ಯನಾರಾಯಣ, ನಟರಾಜು, ಸಿಂಗಯ್ಯ, ಚಂದ್ರಶೇಖರ್, ಗುರುಸ್ವಾಮಿ, ಜಯಲಕ್ಷ್ಮೀ, ರುದ್ರಮ್ಮ, ಸುನಂದರಾಜು, ಚಿಕ್ಕಸ್ವಾಮಿ, ಸೋಮಾಚಾರ್, ಚಿಕ್ಕಸ್ವಾಮಿ, ಜಯಲಕ್ಷ್ಮೀ, ನಾಗಯ್ಯ, ಅಂಕನಾಯಕ, ನಂದೀಶ್ಕುಮಾರ್, ಗಿರೀಶ್, ರವಿಕುಮಾರ್ ಆರಾಧ್ಯ, ಶಿವರಾಜಪ್ಪ, ರುದ್ರಮ್ಮ, ಹೇಮಂತ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement