ರೆಸ್ಟೋರೆಂಟ್ಗೆ ಮಹದೇವ ಪ್ರಸಾದ್ ಚಾಲನೆ
ಕ.ಪ್ರ.ವಾರ್ತೆ ಮೈಸೂರು ಸೆ. 15
ಇಲ್ಲಿನ ಹೆಬ್ಬಾಳು ಕೈಗಾರಿಕ ಪ್ರದೇಶದಲ್ಲಿರುವ ಕಂಟ್ರಿ ಇನ್ ಸ್ಯೂಟ್ಸ್ನಲ್ಲಿ ಸ್ಪೈಸ್ ಎಂಬ ಭಾರತೀಯ ವಿಶೇಷತೆಯ ರೆಸ್ಟೋರೆಂಟ್ ಅನ್ನು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಉದ್ಘಾಟಿಸಿದರು.
ಗೋಲ್ಡನ್ ಸ್ಟಾರ್ ಗಣೇಶ್, ನಟಿಯರಾದ ರಚಿತ ರಾಮ್, ಪ್ರಿಯಾಂಕ ರಾವ್, ನಿರ್ಮಾಪಕ ಕೆ. ಮಂಜು, ಡಾ. ಗೀತಾ ಮಹದೇವ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹೊಟೇಲ್ನ ಪ್ರಧಾನ ವ್ಯವಸ್ಥಾಪಕ ಪಂಕಜ್ ಸಕ್ಸೇನ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಹದೇವ ಪ್ರಸಾದ್, ಸಾಂಸ್ಕೃತಿಕ ನಗರ ಮೈಸೂರಿಗೆ ಇತ್ತೀಚೆಗೆ ಐಟಿ -ಬಿಟಿ ಕಂಪನಿಗಳು ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಇಂತಹ ಉತ್ತಮ ದರ್ಜೆಯ ಪಂಚತಾರ ಹೊಟೇಲ್ ನಿರ್ಮಿಸಿರುವುದು ಇಲ್ಲಿನ ಜನತೆಗೆ ಹಾಗೂ ಪ್ರವಾಸಿಗರಿಗೆ ತುಂಬ ಅನುಕೂಲವಾಗಿದೆ ಎಂದರು.
ಅಮೆರಿಕ ಮೂಲದ ಕಂಟ್ರಿ ಇನ್ ವಿಶ್ವದಲ್ಲಿ 1319 ಹೊಟೇಲ್ಗನ್ನು ತೆರೆದಿದೆ. ಅಂತೆಯೇ ಸಾಂಸ್ಕೃತಿಕ ರಾಜಧಾನಿಯಲ್ಲೂ ಈಗಾಗಲೇ ಆರಂಭಿಸಿರುವ ಈ ಪಂಚತಾರಾ ಹೊಟೇಲ್ನಲ್ಲಿ 130 ಸುಸಜ್ಜಿತ ಐಷಾರಾಮಿ ಕೊಠಡಿಗಳಿವೆ. ದೇಶ ವಿದೇಶಗಳ ವೈವಿಧ್ಯಮಯ ಖಾದ್ಯಗಳು ಇಲ್ಲಿ ಲಭ್ಯವಿದೆ.
ಸ್ಪೈಸ್ ಎಂಬ ಭಾರತೀಯ ವಿಶೇಷತೆ ಸಾರುವ ಈ ರೆಸ್ಟೋರೆಂಟ್ನಲ್ಲಿ ಪ್ರಾಚೀನ ಹಾಗೂ ಸಮಕಾಲಿನ ಪಾಕಗಳ ಸಮ್ಮಿಲನವಿದೆ.