ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 15 Sept 2013, 10:54 am

ಕೆ. ಲಲಿತಾ ದೇವೇಗೌಡ ಆಯ್ಕೆ
ಮೈಸೂರು: ಮೈಸೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿ ಹೊಂದಿರುವ ಶ್ರೀ ಲಕ್ಷ್ಮಿ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಜಿಪಂ ಸದಸ್ಯೆ ಕೆ. ಲಲಿತಾ ದೇವೇಗೌಡ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂಜನಗೂಡು ರಸಬಾಳೆ ತಳಿ ಸಂರಕ್ಷಣೆ ಅವಶ್ಯಕ
ಮೈಸೂರು: ದೇಶ, ವಿದೇಶಗಳಲ್ಲಿ ಬಾರಿ ಬೇಡಿಕೆ ಇರುವ ನಂಜನಗೂಡು ರಸಬಾಳೆ ತಳಿ ಸಂರಕ್ಷಣೆ ಅವಶ್ಯಕ ಎಂದು ಕೃಷಿಕ ಬೋರೇಗೌಡ ಹೇಳಿದರು. ಮೈಸೂರಿನ ವಿವಿಧೆಡೆ ಕೊಡಗು ರಸಬಾಳೆ ಹಾಗೂ ಸೇಲಂ ರಸಬಾಳೆಯನ್ನು ನಂಜನಗೂಡು ರಸಬಾಳೆಯೆಂದು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ವ್ಯತ್ಯಾಸ ತಿಳಿಯದೆ ಗ್ರಾಹಕರು ಮೋಸ ಹೋಗುತ್ತಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ನಂಜನಗೂಡು ತಾಲೂಕಿನ 180ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಈ ಹಿಂದೆ ರಸಬಾಳೆ ಬೆಳೆಯಲಾಗುತ್ತಿತ್ತು. ಆದರೆ ಇಂದು ಕೇವಲ 5- 6 ಹಳ್ಳಿಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಸರ್ಕಾರದ ಸಬ್ಸಡಿ ಪಡೆಯಲು ಕೆಲವರು ಸಂಘ ಮಾಡಿಕೊಂಡು ರಸಬಾಳೆ ಬೆಳೆಯುತ್ತಿರುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.  ಪಚ್ಚ ಬಾಳೆಗೆ ಸರ್ಕಾರ ಎಕರೆಗೆ 30 ಸಾವಿರ ಸಬ್ಸಿಡಿ ನೀಡುತ್ತಿದ್ದು, ರಸಬಾಳೆಗೆ ಕೇವಲ 6 ಸಾವಿರ ಮಾತ್ರ ನೀಡಲಾಗುತ್ತಿದೆ. ಸಬ್ಸಿಡಿಯನ್ನು ಹೆಚ್ಚಿಸಬೇಕು ಹಾಗೂ ನಂಜನಗೂಡು ರಸಬಾಳೆ ಬೆಳೆಯ ಬಗ್ಗೆ ಸಂಶೋಧನೆ ನಡೆಸಿ ಆ ತಳಿಯನ್ನು ಉಳಿಸುವ ಕೆಲಸ  ಮಾಡಬೇಕು ಎಂದು ಅವರು ಆಗ್ರಹಿಸಿದರು. ಒಂದು ಎಕರೆಗೆ 600 -700 ಗಿಡಗಳನ್ನು ಬೆಳೆಸಬಹುದು. ಇದರ ಕೃಷಿಗೆ 25- 30 ಸಾವಿರ ಖರ್ಚಾಗಲಿದೆ. ಲಾಭ 1 ಲಕ್ಷದವರೆಗೆ ನಿರೀಕ್ಷಿಸಬಹುದು. ಈ ರಸಬಾಳೆಯನ್ನು ಯಾವುದೇ ಕಾರಣಕ್ಕೂ ರಾಸಾಯನಿಕದಿಂದ ಬೆಳೆಸಲು ಸಾಧ್ಯವಿಲ್ಲ. ಇದನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುವುದಿಲ್ಲ. ಡಜನ್‌ಗೆ 120 ರಿಂದ 150 ಇದೆ. ಇದನ್ನು ಬೆಳೆಯುವಂಥವರು ತಮ್ಮ ಮೊ.99004 44029  ಸಂಪರ್ಕಿಸಿದರೆ ಅಗತ್ಯ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.  ನಿವೃತ್ತ ಸೈನಿಕ ಹಾಗೂ ಚಿನ್ಮಯ ಫಾರಂ ಮಾಲೀಕ ಡಿ.ಯು. ಪ್ರಕಾಶ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement