ಕೆನರಾ ಬ್ಯಾಂಕ್ನಿಂದ ನಗರದಲ್ಲಿ ಹಿಂದಿ ದಿನಾಚರಣೆ
ಕ.ಪ್ರ.ವಾರ್ತೆ ಮೈಸೂರು ಸೆ. 16
ನಗರದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ರಾಷ್ಟ್ರೀಯ ಹಿಂದಿ ದಿನ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ .ಎಂ.ಜಿ. ಕೃಷ್ಣನ್ ಹಿಂದಿಯ ಮಹತ್ವ ಹಾಗೂ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು. ಮತ್ತೊಬ್ಬ ಅತಿಥಿ ಡಾ.ಮ.ಸು. ಕೃಷ್ಣಮೂರ್ತಿ ಅವರು ಹಿಂದಿ ಭಾಷೆಯ ಸರಳತೆ ಮತ್ತು ಲೋಕ ಪ್ರಿಯತೆಯ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಚಮಂದ್ರ ವಿವಿಧ ಸ್ಪರ್ಧೆ ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಬಹುಮಾನ ವಿತರಿಸಿದರು. ಕೆ.ಎಸ್. ವರದರಾಜನ್ ಅತಿಥಿಗಳನ್ನು ಪರಿಚಯಿಸಿದರು. ರಾಜೇಶ್ವರಿ ಪ್ರಾರ್ಥಿಸಿದರು. ಕೆ.ಎಸ್. ಹೆಬ್ಬಾರ್ ಸ್ವಾಗತಿಸಿದರು. ಎನ್.ಎಸ್. ನಾಗರಾಜು ವಂದಿಸಿದರು. ವನಿತಾ ವಿ. ಗಡಿಯಾರ್ ನಿರೂಪಿಸಿದರು.