ಉಳಿತಾಯ ಮನೋಭಾವ ಉತ್ತೇಜಿಸಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 17
ಭಾರತದ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಮತ್ತು ಬೆಳೆಸುವ ಪ್ರವೃತ್ತಿ ರಕ್ತಗತವಾಗಿ ಬಂದಿದ್ದು, ಅದನ್ನು ಕುಗ್ಗಿಸದೆ ಉತ್ತೇಜನ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಹೇಳಿದರು.
ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಒಕ್ಕೂಟ ಉದ್ಘಾಟಸಿ ಮಾತನಾಡಿದ ಅವರು, ತಾಯಿಯ ಆಧಾರದ ಮೇಲೆ ಕುಟುಂಬದ ವ್ಯವಸ್ಥೆ ನಡೆಯುತ್ತಿದ್ದು, ಹಣ ಉಳಿಸುವ ಮಾರ್ಗವನ್ನು ಹೇಳಿಕೊಡುವ ಅಗತ್ಯ ಇಲ್ಲ, ಆದರೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮಾತನಾಡಿದರು. ವಾಸವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ವೈ.ಎ. ದೇವಪಾಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಹರ್ಷಲತಾ, ಕವಿತಾ ಪ್ರಭುಶಂಕರ್, ಯೋಜನಾ ನಿರ್ದೇಶಕ ಬಿ. ಅಶೋಕ, ತಿಪ್ಪೇಶ್, ಮಹಿಳಾ ಒಕ್ಕೂಟದ ಅಧ್ಯಕ್ಷತೆ ಶೀಲಾ ಶಶಿಕುಮಾರ್, ಪದಾಧಿಕಾರಿಗಳಾದ ಮೀನಾಕ್ಷಿ ಅರಸ್, ಶೋಭಾಪ್ರಕಾಶ್, ಸಂಗೀತಾ ಮಹದೇವ್, ಶರಾವತಿ ಬಸಂತ್, ಶಿಲ್ಪಾ ರಾಜಶೇಖರ್, ಗೀತಾ ವಿಜಯಕುಮಾರ್, ಮಂಜುಳಾ, ಸುಚಿತ್ರಾ ಇದ್ದರು.