ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ವಿದ್ಯುತ್ ನಿಲುಗಡೆ

Mainashree
Updated On : 17 Sept 2013, 11:05 am

ಕ.ಪ್ರ.ವಾರ್ತೆ  ಮೈಸೂರು  ಸೆ. 17
ಇಲ್ಲಿನ ದೊಡ್ಡಕೆರೆ ಮೈದಾನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ.19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಈ ವ್ಯಾಪ್ತಿಗೆ ಒಳಪಡುವ ರಾಮನುಜ ರಸ್ತೆ, ಹೊಸಬಂಡಿಕೇರಿ, ಜೆಎಸ್ಎಸ್ ಆಸ್ಪತ್ರೆ, ಆಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂ ಹಲವು ಭಾಗಗಳು, ಸಬರ್ಬನ್ ಬಸ್ ನಿಲ್ದಾಣ, ನಜರಬಾದ್, ಇಟ್ಟಿಗೆಗೂಡು, ಮೃಗಾಲಯ ಸುತ್ತಮುತ್ತ, ಸರ್ಕಾರಿ ಅತಿಥಿ ಗೃಹ ಸುತ್ತಮುತ್ತ, ತಾಲೂರು ಕಚೇರಿ, ದೇವರಾಜ ಅರಸ್ ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ಧಾರ್ಥನಗರ, ಆಲನಹಳ್ಳಿ ಸುತ್ತಮುತ್ತ, ಗಿರಿದರ್ಶಿನಿ ಬಡಾವಣೆ, ಅರಮನೆ ಸುತ್ತಮುತ್ತ, ಶ್ರೀ ಹರ್ಷ ರಸ್ತೆ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ ಸುತ್ತಮುತ್ತ, ಧನ್ವಂತ್ರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತಮುತ್ತ ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ನರಸಿಂಹರಾಜ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಮೇಟಗಳ್ಳಿ ಹಾಗೂ ಹೆಬ್ಬಾಳ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವಿರುವುದರಿಂದ ಕೆಳಕಂಡ ಪ್ರದೇಶದಲ್ಲಿ ಸೆ.19ರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎಂಜಿನಿಯರ್ ಕೋರಿದ್ದಾರೆ. ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಬೆಳಗೊಳ ಕೈಗಾರಿಕಾ ಪ್ರದೇಶ, ಬೃಂದಾವನ ಬಡಾವಣೆ, ಬಿ.ಎಂ. ಶ್ರೀನಗರ, ಲೋಕನಾಯಕನಗರ, ಭೈರವೇಶ್ವರನಗರ, ಹೆಬ್ಬಾಳ 1ರಿಂದ 3ನೇ ಹಂತ, ಹೆಬ್ಬಾಳ ಹುಡ್ಕೂ ಬಡಾವಣೆ, ಮಂಚೇಗೌಡನಕೊಪ್ಪಲು, ಕುಂಬಾರಕೊಪ್ಪಲು, ಅಭಿಷೇಕ್ ವೃತ್ತ, ಸಂಕ್ರಾಂತಿ ವೃತ್ತ, ಕಾವೇರಿ ವೃತ್ತ, ಕಾವೇರಿ ವೃತ್ತ ಪ್ರದೇಶಗಳು, ಮಹದೇಶ್ವರ ಬಡಾವಣೆ, ಚಾಮುಂಡೇಶ್ವರಿ ರೈಲ್ವೆ ಬಡಾವಣೆ, ಜೆ.ಕೆ. ಟೈರ್ಸ್, ಆರ್ಬಿಐ, ಶಿವಮೊಗ್ಗ ಸ್ಟೀಲ್ಸ್ ಈಎಚ್ಟಿ ಗ್ರಾಹಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement