ಪಿರಿಯಾಪಟ್ಟಣ ತಾಪಂ ಜೆಡಿಎಸ್ಗೆ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಪಂ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಪವಿತ್ರಾ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್ ಅವಿರೋಧ ಆಯ್ಕೆಯಾದರು.
ಪಕ್ಷದ ಆಂತರಿಕ ಒಪ್ಪಂದದಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ರವಿನಾಯಕ ಹಾಗೂ ಉಪಾಧ್ಯಕ್ಷರಾಗಿದ್ದ ಯೋಗೇಶ್ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಎರಡೂ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಿಗದಿಪಡಿಸಲಾಗಿತ್ತು.
ಜೆಡಿಎಸ್ ಪಕ್ಷದವರೆ ಆದ ಪವಿತ್ರಾ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರಕಾಶ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಇವರನ್ನೆ ಅವಿರೋಧವಾಗಿ ಆಯ್ಕೆಮಾಡಲಾಯಿತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ವಿನುತಪ್ರಿಯ ಕಾರ್ಯ ನಿರ್ವಹಿಸಿದರು.
ಪ್ರಭಾರ ಇಒ ಸಿ.ಸಿ. ಮನೋಹರ್, ತಾಪಂ ಸದಸ್ಯರಾದ ಅತ್ತರ್ ಮತಿನ್, ಶಂಕರೇಗೌಡ, ಗೀತಾ, ಶೈಲಜಾ, ಆರ್.ಎಸ್. ಮಹದೇವ್, ರವಿನಾಯಕ, ಯೋಗೇಶ್, ರಘುನಾಥ್, ಜವರಪ್ಪ, ರತ್ನಮ್ಮ, ಸುಪ್ರಿಯ, ಆರ್.ಸಿ. ಚಂದ್ರು ಇದ್ದರು.