ಪ್ರಾಣಿ ಪಾಲಕರ ತರಬೇತಿ
ಕ.ಪ್ರ.ವಾರ್ತೆ ಮೈಸೂರು ಸೆ. 17
ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ದಕ್ಷಿಣ ಭಾರತದ ಮೃಗಾಲಯಗಳ ಪ್ರಾಣಿ ಪಾಲಕರಿಗೆ ಸೆ.21ರಿಂದ 30ರವರೆಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಆರ್ಥಿಕ ನೆರವಿನಿಂದ ಆಯೋಜಿಸುತ್ತಿರುವ ಸದರಿ ತರಬೇತಿಯು ಮೃಗಾಲಯ ಪರಿಸರದಲ್ಲಿ ವನ್ಯಪ್ರಾಣಿಗಳ ನಿರ್ವಹಣೆ ಮತ್ತು ವನ್ಯಪ್ರಾಣಿಗಳ ಆರೋಗ್ಯ ಪಾಲನೆ ಹಾಗೂ ಅವುಗಳ ನಿರ್ವಹಣೆಗೆ ವಿಶೇಷ ಆದ್ಯತೆ ಎಂಬ ವಿಷಯ ಕುರಿತ ಕಾರ್ಯಕ್ರಮವಾಗಿದೆ. ಸೆ.21ರ ಬೆಳಗ್ಗೆ 10.30ಕ್ಕೆ ವಿಶ್ರಾಂತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಅಪ್ಪಯ್ಯ ಕಾರ್ಯಕ್ರಮ ಉದ್ಘಾಟಿಸುವರು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಪ್ರಯೋಗಪಶು ಪಾಲಕ ತರಬೇತಿ: ನಗರದಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್ಐ) ವತಿಯಿಂದ 10ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಪ್ರಯೋಗ ಪಶು ಪಾಲಕ ತರಬೇತಿ ಕೋರ್ಸ್ ಆರಂಭಿಸಲಿದ್ದು, ಭಾರತದಲ್ಲಿ ತರಬೇತಿ ಪಡೆದ ಪ್ರಯೋಗಾಲಯ ಪಶುಪಾಲಕರಿಗೆ ಇರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಿದೆ. ಪರಿಪೂರ್ಣ ತರಬೇತಿ ನೀಡಲಾಗುವುದು. ಸೀಮಿತ ಸೀಟುಗಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದು, ಆಸಕ್ತರು ಡಾ. ಎಸ್.ಪಿ. ಮುತ್ತುಕುಮಾರ್ (0821- 2514990) ಸಂಪರ್ಕಿಸಬಹುದು.