ಸುದ್ದಿ ಸಂಕ್ಷೇಪ
ಯುವ ಜಾಗೃತಿ ವೇದಿಕೆಯಿಂದ ಆಚರಣೆ
ಮೈಸೂರು: ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ವೇದಿಕೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಗರಪಾಲಿಕೆ ಸದಸ್ಯ ರಮೇಶ್, ಡಿಸಿಸಿ ಸದಸ್ಯ ಎನ್. ಚಂದ್ರು ವಿಶ್ವಕರ್ಮ ಅವರು ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ರಮೇಶ್ ಮಾತನಾಡಿ, ನಮ್ಮ ಸಮಾಜವು ಸಂಘಟಿತವಾಗಲು ಎಲ್ಲಾ ಸಹಕಾರ ನೀಡುತ್ತೇನೆ ಎಂದರು. ವೇದಿಕೆ ಅಧ್ಯಕ್ಷ ಕೆ. ಕೆಂಡಗಣ್ಣ, ಕಾರ್ಯದರ್ಶಿ ಟಿ.ಎಸ್. ಲೋಕೇಶ್, ಪದಾಧಿಕಾರಿಗಳಾದ ಕುಮಾರ್, ಸತೀಶ್, ಸಿದ್ದೇಶ್, ರಾಜು, ನಾಗೇಶ್ ಇದ್ದರು.