ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಮಿಕರನ್ನು ಪ್ರತಿಯೊಬ್ಬರು ಗೌರವಿಸಿ: ಶಾಸಕ ಚಿಕ್ಕಮಾದು

Vishwanath S
Updated On : 28 Sept 2013, 12:30 pm

ಎಚ್.ಡಿ. ಕೋಟೆ: ಅತ್ಯಂತ ಶ್ರದ್ಧೆಯಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂದು ಶಾಸಕ ಎಸ್.ಚಿಕ್ಕಮಾದು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಐವರು ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಹೊರ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೂ ಹಾಗೂ ಇಲ್ಲಿನ ಪೌರಕಾರ್ಮಿಕರಿಗೂ ಬಹಳಷ್ಟು ವ್ಯಾತ್ಯಾಸವಿದೆ. ಶೋಷಣೆಗೆ ಒಳಗಾದ ಪೌರಕಾರ್ಮಿಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಿಕೊಡಬೇಕಿದೆ ಎಂದು ಪ್ರತಿಪಾದಿಸಿದರು.
ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಅವಘಡಗಳು ಸಂಭವಿಸಿದಲ್ಲಿ ಅವರ ನೆರವಿಗೆ ಧಾವಿಸಬೇಕು. ಅವರಿಗಾಗಿ ಆರೋಗ್ಯ ವಿಮೆ ಮಾಡಿಸಿಕೊಡಬೇಕು. ಕಾಲ ಕಾಲಕ್ಕೆ ಸರಿಯಾದ ವೇತನ ನೀಡಬೇಕು. ಅವರೂ ಆರ್ಥಿಕವಾಗಿ ಸಬಲರಾಗಬೇಕಾದ ಅನಿವಾರ್ಯತೆ ಇದೆ. ತಾವು ಮುಂದಿನ ಅಧಿವೇಶದಲ್ಲಿ ಪೌರಕಾರ್ಮಿಕರ ಬಗ್ಗೆ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಪಪಂ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರಾದ ನಂಜಯ್ಯ, ಮಾದ, ಗಣೇಶ, ಶ್ರೀರಂಗ, ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಪಪಂ ಸದಸ್ಯರಾದ ತಾಜ್, ಸುಮಾ, ಅನ್ವರ್ ಪಾಷ, ಎಚ್.ಸಿ. ನರಸಿಂಹಮೂರ್ತಿ, ಎನ್. ಉಮಾಶಂಕರ್, ವಿವೇಕಾ, ರತ್ನಮ್ಮ, ಪುಟ್ಟಬಸವನಾಯಕ, ಮಂಜುಳ, ಸುಹಾಸಿನಿ, ಅನಿಲ್, ಮಹೇಶ್ವರಿ, ಶ್ರೀರಂಗ, ಈರೇಗೌಡ, ಎಂ.ಸಿ. ದೊಡ್ಡನಾಯಕ, ನರಸಿಂಹೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement