ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಸ್ವಾಭಿಮಾನಿ ಒಕ್ಕಲಿಗರ ರಕ್ಷಣಾ ಪಡೆ ಉದ್ಘಾಟನೆ

Vishwanath S
Updated On : 28 Sept 2013, 12:28 pm

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ಸ್ವಾಭಿಮಾನಿ ಒಕ್ಕಲಿಗರ ಹಿತರಕ್ಷಣಾ ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಸೆ.29 ರಂದು ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು.
ಅಂದು ಸಂಜೆ 5ಕ್ಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡುವರು.
 ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಅಧ್ಯಕ್ಷತೆ ವಹಿಸುವರು. ರಕ್ಷಣಾ ಪಡೆಯ ಲಾಂಛನವನ್ನು ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಬಿಡುಗಡೆಗೊಳಿಸುವರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ.ಕೆ.ಮಹದೇವ್, ಶಾಸಕ ಸಾ.ರಾ. ಮಹೇಶ್, ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ ಭಾಗವಹಿಸುವರು ಎಂದು ರಕ್ಷಣಾ ಪಡೆಯ ಕಾರ್ಯಾಧ್ಯಕ್ಷ ಎಚ್. ರಾಮೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿ ಮಧ್ಯೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವೈಷಮ್ಯ ಬೆಳೆಸುತ್ತಿದ್ದಾರೆ.
ಆದ ಕಾರಣ ಜಾತಿ ಜಾತಿ ಮಧ್ಯೆ ಸಾಮರಸ್ಯ ತರಲು ಸ್ವಾಭಿಮಾನಿ ಒಕ್ಕಲಿಗರ ರಕ್ಷಣಾ ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಮಾಜದ ಅಭಿವೃದ್ಧಿ ದಿಕ್ಕಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುವುದು ಪಡೆಯ ಉದ್ದೇಶವಾಗಿದೆ.
ಒಕ್ಕಲಿಗ ಸಮಾಜ ಎಲ್ಲರಿಗೂ ತಿಳಿದಿರುವ ಹಾಗೆ ಒಂದು ಜಾತ್ಯತೀತ ಮನೋಭಾವನೆ ಇರುವ ಸಮಾಜವಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯ ಮೂಡಿಸುವುದು, ಸಮಾಜ ಸೇವೆ ಮಾಡುವುದು, ಹರಿದು ಹಂಚಿ ಹೋಗಿರುವ ಒಕ್ಕಲಿಗ ಸಮಾಜವನ್ನು ಒಟ್ಟುಗೂಡಿಸುವುದು ಪಡೆಯ ಕಾರ್ಯಗಳಲ್ಲಿ ಒಂದಾಗಿದೆ ಎಂದರು. ಪದಾಧಿಕಾರಿಗಳಾದ ಸಿ. ಕೃಷ್ಣಪ್ಪ, ಸಿ. ಪುಟ್ಟೇಗೌಡ, ಬಿ.ಟಿ. ರಾಜೂಗೌಡ, ರಾಮಕೃಷ್ಣ, ಹೇಮಲತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement