ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೆಡಿಯಾಲದಲ್ಲಿ ವ್ಯಾಪಾರಿ ಕೊಲೆ

Vishwanath S
Updated On : 28 Sept 2013, 12:31 pm

ನಂಜನಗೂಡು: ವ್ಯಾಪಾರಿಯೊಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದು, ಶವವನ್ನು ಸರ್ಕಾರಿ ಆಸ್ಪತ್ರೆ ಹಿಂಭಾಗ ಎಸೆದು ಹೋಗಿರುವ ಘಟನೆ ಗುರುವಾರ ರಾತ್ರಿ ಜರುಗಿದೆ.
ತಾಲೂಕಿನ ಹೆಡಿಯಾಲ ಗ್ರಾಮದ ನಿವಾಸಿ ನೆಮೀನ್ ಹುಸೇನ್ (33) ಕೊಲೆಯಾದವರು. ಇವರು ಕಳೆದ ಕೆಲವು ವರ್ಷಗಳಿಂದ ಹಳ್ಳಿಗಳಲ್ಲಿ ಪ್ಲಾಸ್ಟಿಕ್ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಗುರುವಾರ ಎಂದಿನಂತೆ ಮನೆಯಿಂದ ಬೆಳಗ್ಗೆ ವ್ಯಾಪಾರಕ್ಕೆಂದು ಹೋದವರು ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಗಾಬರಿಯಾಗಿದ್ದರು.
ಶುಕ್ರವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆ ಹಿಂಭಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹುಸೇನ್ ಶವ ಪತ್ತೆಯಾಯಿತು. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮೃತನ ಅಣ್ಣ ಮುಜೀರ್ ಅಲಿ ಹುಲ್ಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎಎಸ್ಪಿ ಡಾ.ಪಿ. ರಾಜ, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಎಸ್. ರಘು, ಎಸ್‌ಐ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.

ಬಸ್ಸು- ಆಪೇ ಆಟೋ ಡಿಕ್ಕಿ
ಎಚ್.ಡಿ. ಕೋಟೆ: ತಾಲೂಕಿನ ಕೋಳಗಾಲ ಸಮೀಪ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಆಪೇ ಆಟೋ ನಡುವೆ ಡಿಕ್ಕಿ ಸಂಭವಿಸಿ, ಅಪಘಾತದಲ್ಲಿ ಗಾಯಗೊಂಡವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಕಡೆಗೆ ಹೋಗುತ್ತಿದ್ದ ಬಸ್ಸು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಆಟೋದಲ್ಲಿ ತಾಲೂಕಿನ ಬೆಳತೂರು ಶೆಡ್‌ನ ಕೆಂಚನಾಯಕ (50), ತಿಮ್ಮನಾಯಕ (24) ಎಂಬುವವರಿಗೆ ಗಾಯಗಳಾಗಿದ್ದು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಿಟಕಿ ಸಜ್ಜಾ ಕುಸಿದು ಇಬ್ಬರಿಗೆ ಗಾಯ: ಆಸ್ಪತ್ರೆಗೆ ದಾಖಲು
ಮೈಸೂರು: ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಹಾರನಹಳ್ಳಿಯ ನಿವಾಸಿಗಳಾದ ವಸಂತ ಮತ್ತು ರೇಖಾ ಗಾಯಗೊಂಡವರು. ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ಬಂದಿದ್ದ ಇವರು ಶುಕ್ರವಾರ ಬೆಳಗ್ಗೆ ಆಸ್ಪತ್ರೆ ಕಟ್ಟಡದಿಂದ ಹೊರ ಬರುವಾಗ ಕಿಟಕಿಗೆ ಹೊಂದಿಕೊಂಡಂತೆ ಇದ್ದ ಸಜ್ಜಾ ಕುಸಿದು ಬಿದ್ದಿದೆ. ಘಟನೆಯಿಂದ ಇವರ ತಲೆಗೆ ಪೆಟ್ಟು ಬಿದ್ದು, ರಕ್ತ ಸ್ರಾವವಾಗಿದೆ. ಕೂಡಲೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಎಕ್ಸರೇ ತೆಗೆಸಲಾಗಿದೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆನೆ ದಂತ ಮಾರಾಟ: ಆರೋಪಿ ಸೆರೆ
ಮೈಸೂರು: ಆನೆ ದಂತ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುವೆಂಪುನಗರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಜಯ್‌ಕುಮಾರ್ ಸಿಕ್ಕಿಬಿದ್ದ ಆರೋಪಿ. ಆನೆ ದಂತವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆತನನ್ನು ಪೊಲೀಸರು ದಂತ ಖರೀದಿಸುವ ನೆಪದಲ್ಲಿ ಹೋಗಿ, ವ್ಯಾಪಾರ ಕುದುರುವಂತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಬ್ಬರಿಗೆ ಗಾಯ
ಮೈಸೂರು: ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು ಹಾರನಹಳ್ಳಿಯ ನಿವಾಸಿಗಳಾದ ವಸಂತ ಮತ್ತು ರೇಖಾ ಗಾಯಗೊಂಡವರು. ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ಬಂದಿದ್ದ ಇವರು ಶುಕ್ರವಾರ ಬೆಳಗ್ಗೆ ಆಸ್ಪತ್ರೆ ಕಟ್ಟಡದಿಂದ ಹೊರ ಬರುವಾಗ ಕಿಟಕಿಗೆ ಹೊಂದಿಕೊಂಡಂತೆ ಇದ್ದ ಸಜ್ಜಾ ಕುಸಿದು ಬಿದ್ದಿದೆ. ಘಟನೆಯಿಂದ ಇವರ ತಲೆಗೆ ಪೆಟ್ಟು ಬಿದ್ದು, ರಕ್ತ ಸ್ರಾವವಾಗಿದೆ. ಕೂಡಲೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಎಕ್ಸರೇ ತೆಗೆಸಲಾಗಿದೆ.

ಹಾಲು ಕಳ್ಳನಿಗೆ ಗೂಸಾ
ಮೈಸೂರು: ಹಾಲಿನ ಪ್ಯಾಕೆಟ್‌ಗಳನ್ನು ಕದ್ದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಅಶೋಕ ರಸ್ತೆಯ ಮಿಲಾದ್ ಪಾರ್ಕ್ ಬಳಿ ಶುಕ್ರವಾರ ನಡೆದಿದೆ. ಮೂಲತಃ ಮಣಿಪುರದವ ಎನ್ನಲಾದ ಫಿರೋಜ್ ಧರ್ಮದೇಟು ತಿಂದ ಆರೋಪಿ. ಈತ ಮಿಲಾದ್ ಪಾರ್ಕ್ ಬಳಿ ಅರ್ಧ ಲೀ. ಹಾಲನ್ನು 5 ರಿಂದ 10 ಕ್ಕೆ ಮಾರಾಟ ಮಾಡುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಅನುಮಾನಗೊಂಡು ವಿಚಾರಿಸಿದಾಗ ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement