ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಂಗೋತ್ರಿಯಲ್ಲಿ ರಂಗೇರಿದ ಯುವ ಸಂಭ್ರಮ

Vishwanath S
Updated On : 30 Sept 2013, 12:20 pm

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 29
ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದ ಭಾನುವಾರದ ಕಾರ್ಯಕ್ರಮಗಳಿಗೆ ರಂಗೇರಿತ್ತು.
ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ನೂರಾರು ಮಂದಿ ಕಾಲೇಜು ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ತಮ್ಮ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ನೋಡುಗರನ್ನು ರಂಜಿಸಿದರು.
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಂಸದ ಆರ್.ಧ್ರುವನಾರಾಯಣ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ಜಿಲ್ಲಾಧಿಕಾರಿ ಸಿ. ಶಿಖಾ ಆಗಮಿಸಿದ್ದರು.
ಕೆ.ಆರ್.ನಗರ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರ ನೃತ್ಯದೊಂದಿಗೆ ಭಾನುವಾರ ಕಾರ್ಯಕ್ರಮ ಆರಂಭವಾಯಿತು. ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರ ಜಾನಪದ ನೃತ್ಯ, ಮೂಗೂರು ಸರ್ಕಾರಿ ಪಿಯು ಕಾಲೇಜು- ಪಟದ ಕುಣಿತ, ಕಂಸಾಳೆ, ಮಹರ್ಷಿ ಮಹಿಳಾ ಪಿಯು ಕಾಲೇಜು- ನೃತ್ಯ, ಹುಣಸೂರು ಸರ್ಕಾರಿ ಮಹಿಳಾ ಕಾಲೇಜು- ಸಾಮೂಹಿಕ ನೃತ್ಯವು ನೋಡುಗರನ್ನು ರಂಜಿಸಿತು.
ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು- ಮಹಿಳಾ ಸಬಲೀಕರಣ, ಪೀಪಲ್ಸ್ ಪಾರ್ಕ್‌ನ ಬಾಲಕಿಯರ ಸರ್ಕಾರಿ ಪಿಯು ಕಾಲೇಜು- ಶಿವ ತಾಂಡವ, ಮಂಡ್ಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು- ಅಮರ ಮಧುರ ಪ್ರೇಮ, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು- ಫ್ಯೂಜನ್ ಡ್ಯಾನ್ಸ್ ಮನಸೆಳೆಯಿತು.
ವಿವೇಕಾನಂದ ಸಂಯುಕ್ತ ಪಿಯು ಕಾಲೇಜು- ಮಹಿಷಾಸುರ ಮರ್ದಿನಿಯ ದುಷ್ಟರ ಸಂಹಾರ, ಚಿತ್ರದುರ್ಗದ ಹಿರಿಯೂರು ತಾಲೂಕಿನ ನವೋದಯ ವಿದ್ಯಾಲಯ- ನೃತ್ಯ ರೂಪಕ, ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು- ಪೂಜಾ ಕುಣಿತ, ಜೆಎಸ್‌ಎಸ್ ಮಹಿಳಾ ಕಾಲೇಜು- ಪರಿಸರ ಸಂರಕ್ಷಣೆ, ನಟರಾಜ ಮಹಿಳಾ ಪಿಯು ಕಾಲೇಜು- ನೃತ್ಯರೂಪಕ, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು- ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು.
ಮಾನಸಗಂಗೋತ್ರಿ ಮಯನ್ಮಾರ್ ತಂಡ, ಲಯ್ಸೋ ತಂಡ, ಮೋಸಂಬಿಕ್ಯೂ ತಂಡಗಳ ನೃತ್ಯ ಕಾರ್ಯಕ್ರಮವು ವಿಶೇಷವಾಗಿತ್ತು. ದಸರಾ ಉಪ ವಿಶೇಷಾಧಿಕಾರಿಯಾದ ಎಂಡಿಎ ಆಯುಕ್ತ ಎಸ್. ಪಾಲಯ್ಯ, ಯುವ ದಸರಾ ಉಪಸಮಿತಿ ಅಧ್ಯಕ್ಷ ಎಸ್.ಎಸ್. ನಿರಂಜನ್, ಉಪಾಧ್ಯಕ್ಷ ಎಂ. ರಾಮಕೃಷ್ಣ, ಕಾರ್ಯಾಧ್ಯಕ್ಷ ನೆಹರು ಯುವ ಕೇಂದ್ರ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement