ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಾರದೊಳಗೆ ನೀರು ಕೆರೆಗೆತುಂಬಿಸದಿದ್ದರೆ ಧರಣಿ

Vishwanath S
Updated On : 30 Sept 2013, 12:20 pm

ಕ.ಪ್ರ.ವಾರ್ತೆ ,  ಭೇರ್ಯ ,  ಸೆ. 29
ತಾಲೂಕಿನಲ್ಲಿ ಬರಿದಾಗಿರುವ ಕೆರೆಕಟ್ಟೆಗಳಿಗೆ ವಾರದೊಳಗೆ ನೀರು ತುಂಬಿಸದಿದ್ದರೆ ನಾನೇ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಮಿರ್ಲೆ ಹೋಬಳಿಯ ತಂದ್ರೆ ಅಂಕನಹಳ್ಳಿ ಮತ್ತು ಮುದುಗುಪ್ಪೆ ಗ್ರಾಮಗಳ ಕೊನೆ ಭಾಗದವರೆಗೆ ಗೊರೂರಿನ ಹೇಮಾವತಿ ನಾಲೆಯ ನೀರು ಹರಿಯುತ್ತಿಲ್ಲ ಎಂಬ ರೈತರ ಆರೋಪದ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಇದಕ್ಕೆ ಕಾರಣರಾದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಅಧಿಕಾರಿಗಳೊಂದಿಗೆ ನಾಲೆ ಏರಿ ಮೇಲೆ ಪಾದಯಾತ್ರೆ ನಡೆಸಿ ಕೆರೆಕಟ್ಟೆಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ತಾಲೂಕಿನಲ್ಲಿರುವ ಹಾರಂಗಿ, ಹೇಮಾವತಿ ಭಾಗಗಳ ವ್ಯಾಪ್ತಿಯಲ್ಲಿ ಕೆಲವು ಕೆರೆಕಟ್ಟೆಗಳನ್ನು ಇದೂವರೆಗೂ ತುಂಬಿಲ್ಲ ಎಂದು ಶಾಸಕರು ನೀರಾವರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ವಾರದೊಳಗೆ ಬರಿದಾಗಿರುವ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವಂತೆ ಆದೇಶಿಸಿದರು.
ಎಇಇಗಳಾದ ರಂಗಸ್ವಾಮಿ, ಬಸವರಾಜ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜೆಡಿಎಸ್ ಮುಖಂಡರಾದ ಚೌಕಹಳ್ಳಿ ಆನಂದ್, ಮಿರ್ಲೆ ಧನಂಜಯ, ತಂದ್ರೆ ಅಂಕನಹಳ್ಳಿ ಮತ್ತು ಮುದುಗುಪ್ಪೆ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement