ಅಕ್ರಮ ದಾಸ್ತಾನು; 62 ಕ್ವಿಂಟಲ್ ಅಕ್ಕಿ ವಶ
ಕ.ಪ್ರ.ವಾರ್ತೆ , ಮೈಸೂರು , ಸೆ. 30
ನಗರದ ಲಷ್ಕರ್ ಮತ್ತು ಉದಯಗಿರಿ ಠಾಣೆ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಒಟ್ಟು 62 ಕ್ವಿಂಟಲ್ ಅಕ್ಕಿಯನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾ ಸತ್ತಾರ್ ಸೇಠ್ ಬ್ಲಾಕ್ ನಿವಾಸಿ ನಸ್ರುಲ್ಲಾ ಎಂಬವರ ಮನೆಯಲ್ಲಿ ಅನಧಿಕೃತವಾಗಿ ರಹದಾರಿ ಇಲ್ಲದೇ ದಾಸ್ತಾನು ಮಾಡಿದ್ದ ಒಟ್ಟು 48 ಕ್ವಿಂಟಲ್ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.
ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಂತಿನಗರ ಅಲ್ ಕರೀಂ ಶಾಲೆ ಬಳಿಯ ನಿವಾಸಿ ಯೂನಸ್ ಖಾನ್ ಎಂಬವರ ಮನೆಯಲ್ಲಿದ್ದ 4 ಕ್ವಿಂಟಲ್ ಹಾಗೂ ಕ್ಯಾಂಟರ್ ವಾಹನದಲ್ಲಿದ್ದ 10 ಕ್ವಿಂಟಲ್ ಸೇರಿದಂತೆ ಒಟ್ಟು 14 ಕ್ವಿಂಟಲ್ ಪಡಿತರ ಅಕ್ಕಿ, ಕ್ಯಾಂಟರ್ ವಾಹನವನ್ನು ಉದಯಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಯೂನಸ್ ಖಾನ್ ಹಾಗೂ ವಾಹನ ಚಾಲಕ ಜಾಬೀರ್ ಎಂಬವರನ್ನು ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.