ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಎಸ್‌ಎಸ್ ಕಾಲೇಜಲ್ಲಿ ವಿದ್ಯಾರ್ಥಿಯ ಕವನ ಸಂಕಲನ ಬಿಡುಗಡೆ

Vishwanath S
Updated On : 1 Oct 2013, 12:43 pm

ನಂಜನಗೂಡು: ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿನ ಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಬಿ.ಇಡಿ ವಿದ್ಯಾರ್ಥಿ ಕೆ.ಆರ್. ಅನಿಲ್‌ಕುಮಾರ್ ಅವರ ಬಾನಷ್ಟು ಭಾವನೆ ಎನ್ನುವ ಸ್ವರಚಿತ ಕವನ ಸಂಕಲನವನ್ನು ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರ ಸಮ್ಮುಖದಲ್ಲಿ ಪ್ರಾಂಶುಪಾಲ ಡಾ.ಎಂ.ಸಿ ನಟರಾಜ ಬಿಡುಗಡೆಗೊಳಿಸಿದರು.
ಕ್ರಿಯಾಶೀಲತೆಗೆ ವಯಸ್ಸಿನ ಅಂತರವಿರುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವರಚಿತ ಕವನ ಸಂಕಲನ ಬಿಡುಗಡೆ ಮಾಡುವುದು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿ. ಈ ಕವನ ಸಂಕಲನವು ಸುತ್ತೂರಿನ ಜಗದ್ಗುರುಗಳ ಸೇವೆಯ ಹಿರಿಮೆ ಸಾರುವ ಜಗದ್ಗುರುಗಳಿಗೆ ನಮನ ಎಂಬ ಕವಿತೆಯಿಂದ ಪ್ರಾರಂಭವಾಗಿ, ವಾತ್ಸಲ್ಯ, ಪ್ರೀತಿ, ಪ್ರೇಮದ ಮೂಲಕ ಹಾದು ಹೋಗಿ ಕೊನೆಗೆ ನಾಡಿನಲ್ಲಿನ ಬರ ಪರಿಹಾರ ನೀಗಿಸಲು ದೇವರಲ್ಲಿ ಪ್ರಾರ್ಥಿಸುವ ದೊರೆಗೊಂದು ಮೊರೆ ಎನ್ನುವ ಸಾಮಾಜಿಕ ಕಳಕಳಿಯಿರುವ ಕವನದೊಂದಿಗೆ ಕೊನೆಗೊಳ್ಳುತ್ತದೆ ಎಂದರು.
ವಿದ್ಯಾರ್ಥಿ ಹಾಗೂ ಕವಿ ಅನಿಲ್‌ಕುಮಾರ್ ಮಾತನಾಡಿ, ಪದವಿ ಪೂರ್ವದಿಂದಲೂ ನನಗೆ ಕವನ ರಚನೆ ಬಗ್ಗೆ ಆಸಕ್ತಿ ಇತ್ತು. ಆದರೆ ಅಲ್ಲಿ ಪ್ರೋತ್ಸಾಹದ ವಾತಾವರಣ ಸಿಗಲಿಲ್ಲ ಎಂದರು.
ಕನ್ನಡ ಉಪನ್ಯಾಸಕ ಜಿ.ಎನ್. ಮಂಜುನಾಥ ಕವನ ರಚನೆಗೆ ಸಹಾಯವಾಗುವ ಕೆಲವು ಸಲಹೆಗಳನ್ನು ನೀಡಿದರು. ಪ್ರಶಿಕ್ಷಣಾರ್ಥಿಯಾದ ಸುಜಾತ ಪ್ರಾರ್ಥಿಸಿದರು. ಎಸ್. ಮಹೇಶ್ವರಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement