ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಎಸ್‌ಬಿಎಂ ಶತಮಾನೋತ್ಸವ

Vishwanath S
Updated On : 1 Oct 2013, 12:48 pm

ಮೈಸೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅ.2ಕ್ಕೆ ಶತಮಾನೋತ್ಸವ ಪೂರೆಸುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 7ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ವಾಕಥಾನ ಏರ್ಪಡಿಸಿದ್ದು, ಜಿಲ್ಲಾಧಿಕಾರಿ ಸಿ.ಶಿಖಾ ಚಾಲನೆ ನೀಡುವರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ಎಸ್‌ಬಿಎಂ ಪ್ರಧಾನ ವ್ಯವಸ್ಥಾಪಕ ಎಸ್. ಬಂಗಾರರಾಜು, ಉಪಪ್ರಧಾನ ವ್ಯವಸ್ಥಾಪಕ ಪಿ.ಬಾಲಕಿಶನ್ ಭಾಗವಹಿಸುವರು. ಬೆಳಗ್ಗೆ 10ಕ್ಕೆ ಗಂಗೋತ್ರಿಯ ಲಲಿತಕಲಾ ಕಾಲೇಜಿನಲ್ಲಿ ಉದ್ಯೋಗಿಗಳಿಗೆ ವಿವಿಧ ಸ್ಪರ್ಧೆ, ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಚಲನಚಿತ್ರೋತ್ಸವಕ್ಕೆ ಸಿನಿಮಾ ದಿಗ್ಗಜರು
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅ.5 ರಂದು ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ ದಸರಾ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರನ್ನು ಆಹ್ವಾನಿಸಲಾಗಿದೆ. ಚಿತ್ರ ನಟ, ವಸತಿ ಸಚಿವ ಅಂಬರೀಶ್, ನಟಿ ಹಾಗೂ ಸಚಿವೆ ಉಮಾಶ್ರೀ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ನಿರ್ಮಾಪಕರಾದ ಪಾರ್ವತಮ್ಮ ರಾಜಕುಮಾರ್, ಬಿ. ಸರೋಜಾದೇವಿ, ಲೀಲಾವತಿ, ಸುಮಲತಾ ಅಂಬರೀಷ್, ತಾರಾ, ಪ್ರಿಯಾಂಕ, ಉಪೇಂದ್ರ, ದರ್ಶನ್, ವಿನೋದ್‌ರಾಜ್, ಐಂದ್ರಿತಾ ರೈ, ದಿಗಂತ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ, ಗುರುಕಿರಣ್, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್ ಅವರಿಗೆ ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷೆ ಮೀನು ತೂಗುದೀಪ್ ಆಹ್ವಾನ ನೀಡಿದ್ದಾರೆ.
ಯೋಗ ಸಪ್ತಾಹ
ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್‌ನಲ್ಲಿ ಅ.2 ರಿಂದ 10 ರವರೆಗೆ ದಸರಾ ಪ್ರಯುಕ್ತ ಯೋಗ ಸಪ್ತಾಹ ಏರ್ಪಡಿಸಿದ್ದು, ಯೋಗಗುರು ಬಿ.ಶಾಂತಾರಾಮ್ ಹಾಗೂ ವಿನಯ ಶಾಂತರಾಮ್ ನಡೆಸಿಕೊಡುವರು. ಮೊ. 94496 96998 ಸಂಪರ್ಕಿಸಬಹುದು.
ರಸಪ್ರಶ್ನೆ ಸ್ಪರ್ಧೆ
ಟಿ4ಬಿ ಸಂಸ್ಥೆಯಿಂದ ಅ.2 ರಂದು ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದ್ದು, ಮೊ. 78290 44312 ಸಂಪರ್ಕಿಸಬಹುದು.
ಕ್ಯಾನ್ಸರ್ ತಪಾಸಣೆ
ಭಾರತ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಅ.3ರ ಬೆಳಗ್ಗೆ 10ಕ್ಕೆ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 99021 45414 ಸಂಪರ್ಕಿಸಿ.
ತಂಬಾಕು ಸೇವನೆ: 649 ಪ್ರಕರಣ ದಾಖಲು
ಮೈಸೂರು: ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯ ಅನುಷ್ಠಾನ ಕುರಿತಂತೆ ವಿಶೇಷ ಅಭಿಯಾನ ಮುಂದುವರಿಸಿ, ಶನಿವಾರದವರೆಗೆ 649 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 649 ಪ್ರಕರಣ ದಾಖಲಿಸಿ 1,07,800 ದಂಡವನ್ನು ವಸೂಲು ಮಾಡಲಾಗಿದೆ. 2 ಪ್ರಕರಣ ಸಂಬಂಧಿಸಿದಂತೆ ನ್ಯಾಯಾಲಯದ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದರ್ಗಾಕ್ಕೆ ಟೈಲ್ಸ್ ಅಳವಡಿಕೆ
ಮೈಸೂರು: ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಬಡಾ ಮಕಾನ್‌ನ ಚಾರ್ ಬರಸ್ ಕೆ ಪೀರ್ ದರ್ಗಾದಲ್ಲಿ ಟೈಲ್ಸ್ ಅಳವಡಿಸುವ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು. ಉಮರ್ ಷಾ ಮಕಾನ್ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಖಲೀಲ್ ಉರ್ ರೆಹಮಾನ್, ಪಾಲಿಕೆ ಮಾಜಿ ಸದಸ್ಯ ಸೈಯ್ಯದ್ ಅಕ್ರಮ್, ಸೈಯ್ಯದ್ ಅಶ್ವಾಖ್ ಪೀರ್, ಮೌಲ್ವಿ ಸೈಯ್ಯದ್ ಗೌಸ್ ಪೀರಾನ್ ಶತಾರಿ ಖಾದ್ರಿ, ಎಂಜಿನಿಯರ್ ಚಂದ್ರಮೋಹನ್, ರಫೀಕ್ ಅಹಮ್ಮದ್, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಲೀಲ್ ಉರ್ ರೆಹಮಾನ್, ಶಾಹೀದ್ ಇತರರು ಭಾಗವಹಿಸಿದ್ದರು.
ಗಾಂಧಿ ಜಯಂತಿ
ಮೈಸೂರು: ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಅ.2ರ ಬೆಳಗ್ಗೆ 8.30ಕ್ಕೆ ಗಾಂಧಿ ಜಯಂತಿ ಏರ್ಪಡಿಸಿದ್ದು, ಮಾಜಿ ಶಾಸಕ ಡಿ.ಮಾದೇಗೌಡ, ಸಿಪಿಡಿಪಿಎಸ್ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಭಾಗವಹಿಸುವರು. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಅ.2ರ ಬೆಳಗ್ಗೆ 10ಕ್ಕೆ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗಾಂಧಿ ಜಯಂತಿ ಏರ್ಪಡಿಸಿದ್ದು, ಶಾಸಕ ಚಿಕ್ಕಮಾದು ಉದ್ಘಾಟಿಸುವರು. ಶಾಸಕರಾದ ಸಿದ್ದರಾಜು, ವಾಸು, ಎಂ.ಕೆ. ಸೋಮಶೇಖರ್, ಮಾಜಿ ಸಚಿವ ಎಸ್.ಎ. ರಾಮದಾಸ್ ಭಾಗವಹಿಸುವರು. ಪ್ರೊ.ಸಿ.ಪಿ. ಸಿದ್ಧಾಶ್ರಮ ಉಪನ್ಯಾಸ ನೀಡುವರು.
ಧ್ಯಾನ ಶಿಬಿರ
ಮೈಸೂರು: ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಿಳಾ ಸದನದಲ್ಲಿ ಅ.2 ರಿಂದ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಉಚಿತ ಶಿಬಿರ ಆರಂಭಿಸಲಿದ್ದು, ಆಸಕ್ತರು ಮೊ. 94498 86297 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement