ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೀರು ಪೂರೈಕೆ ಕಾಮಗಾರಿಗೆ 1.33 ಕೋಟಿ ಅನುದಾನ

Vishwanath S
Updated On : 1 Oct 2013, 12:44 pm

ಕ.ಪ್ರ.ವಾರ್ತೆ ,  ಕೆ.ಆರ್.ನಗರ ,  ಸೆ. 30
ತಾಲೂಕಿನ ಹೊಸೂರು ಜಿಪಂ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿಗೆ 1.33 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹೇಳಿದ್ದಾರೆ.
ದಮ್ಮನಹಳ್ಳಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ 16 ಲಕ್ಷ, ದಮ್ಮನಹಳ್ಳಿ ಕೊಪ್ಪಲು ಗ್ರಾಮಕ್ಕೆ 16 ಲಕ್ಷ ಮತ್ತು ನಾಡಪ್ಪನಹಳ್ಳಿ ಕೊಪ್ಪಲು ಗ್ರಾಮಕ್ಕೆ 15 ಲಕ್ಷ ನೀಡಲಾಗಿದ್ದು, ಕ್ಷೇತ್ರದ ವ್ಯಾಪ್ತಿಯ ಚಿಬುಕಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಏಳು ಲಕ್ಷ, ಹೊಸಕೋಟೆ ಮತ್ತು ಗೊಲ್ಲರಕೊಪ್ಪಲು ಗ್ರಾಮಗಳಿಗೆ ತಲಾ ಆರು ಲಕ್ಷ ರು.ಗಳು ಸಣ್ಣ ನೀರು ಸರಬರಾಜು ಯೋಜನೆಯಡಿ ಮಂಜೂರಾಗಿದೆ ಎಂದು ತಿಳಿಸಿದರು. 17 ಶಾಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಂಜೂರಾತಿ ದೊರೆತಿದ್ದು, ದಿಡ್ಡಹಳ್ಳಿ, ಹಳಿಯೂರು, ಸಾಲೆಕೊಪ್ಪಲು, ಬೆಣಗನಹಳ್ಳಿ, ಹೊಸೂರು, ಚಿಬುಕಹಳ್ಳಿ, ಹೊಸಕೋಟೆ, ಸೋಮನಹಳ್ಳಿ, ದಮ್ಮನಹಳ್ಳಿ, ಅಂಕನಹಳ್ಳಿ ಕೊಪ್ಪಲು, ವಡ್ಡರಕೊಪ್ಪಲು, ಹಾಡ್ಯ, ಮಾಯಿಗೌಡನಹಳ್ಳಿ, ನಾಡಪ್ಪನಹಳ್ಳಿ, ಚಿಕ್ಕಹನಸೋಗೆ, ಎರೆಮನುಗನಹಳ್ಳಿ ಶಾಲೆಗಳಿಗೆ ತಲಾ 1.5 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕ್ಷೇತ್ರ ವ್ಯಾಪ್ತಿಯ 24 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುದಾನ ನೀಡಲಾಗಿದ್ದು, ಚಿಕ್ಕಹನಸೋಗೆ, ಬಂಡಹಳ್ಳಿ, ಕೊಳೂರು, ಸಣ್ಣೇಗೌಡನ ಕೊಪ್ಪಲು, ಚನ್ನಂಗೆರೆ, ಕರ್ತಾಳು, ದಿಡ್ಡಹಳ್ಳಿ, ಹಳಿಯೂರು, ಬಡಾವಣೆ, ಜವರೇಗೌಡನ ಕೊಪ್ಪಲು, ಸಾಲೆಕೊಪ್ಪಲು, ಬೆಣಗನಹಳ್ಳಿ, ಚಿಬುಕಹಳ್ಳಿ,  ಹೊಸಕೋಟೆ, ಕೋಗಿಲೂರು, ಸೋಮನಹಳ್ಳಿ, ಅಂಕನಹಳ್ಳಿ, ದಮ್ಮನಹಳ್ಳಿ, ಹಾಡ್ಯ, ಮಾಯಿಗೌಡನಹಳ್ಳಿ, ನಾಡಪ್ಪನಹಳ್ಳಿ, ಸಕ್ಕರೆ ಮತ್ತು ಹನಸೋಗೆಯ ಎರಡು ಕೇಂದ್ರಗಳಿಗೆ ತಲಾ 75 ಸಾವಿರ ನೀಡಲಾಗಿದ್ದು, ಈ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಇದರ ಜತೆಗೆ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗ್ಡೆ 45 ಲಕ್ಷ ಅನುದಾನ ನೀಡಲಾಗಿದ್ದು, ರಸ್ತೆ ಪರಿಶೀಲಿಸಿದ ನಂತರ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement