ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೃತ್ಯಗಳ ಝೇಂಕಾರ; ಯುವಜನತೆಯ ಹರ್ಷೋದ್ಗಾರ

Vishwanath S
Updated On : 1 Oct 2013, 12:43 pm

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 30
ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ದಸರಾ ಯುವ ಸಂಭ್ರಮ ಕಾರ್ಯಕ್ರಮಗಳು ಸೋಮವಾರ ಸಹ ಮುಂದುವರಿದವು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುಪಡಿಸಿದ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಯುವ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು, ಕುಣಿದು ಸಂಭ್ರಮಿಸಿದರು. ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತ್ಯ, ಚಾಮರಾಜನಗರದ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಕಾಯಕ ಯೋಗಿಗಳ ಜನಪದರ ದಸರಾ ಸಂಭ್ರಮ ನೃತ್ಯದ ಮೂಲಕ ಸಂಭ್ರಮ ಆರಂಭವಾಯಿತು.
ಕೆ.ಆರ್. ನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು- ನಮ್ಮ ನೆಲದ ಭಾಗ್ಯ, ಮಹಾರಾಜ ಸರ್ಕಾರಿ ಪಿಯು ಕಾಲೇಜು- ನೃತ್ಯ, ಗುಂಡ್ಲುಪೇಟೆ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು- ಪರಿಸರ ಉಳಿಸಿ ಪರಿಸರ ಬೆಳೆಸಿ, ವಿಜಯನಗರ ಲರ್ನರ್ಸ್ ಪಿಯು ಕಾಲೇಜು- ಜಾನಪದ ನೃತ್ಯ. ಡಿಪ್ಲೊಮಾ ಇನ್ ಫಿಲಂ ಸ್ಟಡೀಸ್- ನೃತ್ಯ, ದೇವಲಾಪುರ ಜೆಎಸ್‌ಎಸ್ ಪಿಯು ಕಾಲೇಜು- ದೇವ ಜೈ ಗಣೇಶ, ಎಸ್‌ಎಲ್‌ಡಿ ಗ್ರೂಪ್ಸ್- ಶಿವ ತಾಂಡವ, ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಪಿಯು ಕಾಲೇಜು ವಿದ್ಯಾರ್ಥಿನಿಯರು ಭಾರತೀಯ ಸಮಕಾಲೀನ ನೃತ್ಯರೂಪ, ಯುವರಾಜ ಕಾಲೇಜು- ನೃತ್ಯ, ಕರ್ನಾಟಕ ವಿಶ್ವವಿದ್ಯಾಲಯ- ದೇಶಭಕ್ತಿ ಪರಿಮಳ, ಜಾನಪದ ವಾದ್ಯ ಮೇಳ, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜು- ಚೆಲ್ಲಿದರು ಮಲ್ಲಿಗೆಯ, ನಟರಾಜ ಮಹಿಳಾ ಕಾಲೇಜು- ಮಹಿಷಾಸುರ ಮರ್ಧಿನಿ ನೃತ್ಯವು ಗಮನ ಸೆಳೆಯಿತು.
ಈ ಕಾರ್ಯಕ್ರಮಗಳ ನಡುನಡುವೆ ಮಾನಸಗಂಗೋತ್ರಿಯ ತಾನ್‌ಜೇನಿಯಾ, ವಿಯೆಟ್ನಾಂ, ಜಿಂಬಾಬ್ವೆ, ಥಾಯ್ಲೆಂಡ್ ತಂಡದವರು ಆಯಾ ದೇಶದ ಸಂಪ್ರದಾಯ ನೃತ್ಯ ಪ್ರಸ್ತುತಪಡಿಸಿದರು. ದಸರಾ ಉಪ ವಿಶೇಷಾಧಿಕಾರಿಯಾದ ಎಂಡಿಎ ಆಯುಕ್ತ ಎಸ್. ಪಾಲಯ್ಯ, ಯುವ ದಸರಾ ಉಪಸಮಿತಿ ಅಧ್ಯಕ್ಷ ಎಸ್.ಎಸ್. ನಿರಂಜನ್, ಉಪಾಧ್ಯಕ್ಷ ಎಂ. ರಾಮಕೃಷ್ಣ, ಕಾರ್ಯಾಧ್ಯಕ್ಷ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಕಾರ್ಯದರ್ಶಿಯಾದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಡಿ.ಬಿ. ಲಿಂಗಣ್ಣಯ್ಯ, ಕಾರ್ಯಕ್ರಮ ಸಂಯೋಜಕ ಡಾ.ಎಂ. ರುದ್ರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement