ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬರಹದ ಮೂಲಕ ಸಮಾಜ ತಿದ್ದಲು ಸಲಹೆ

Vishwanath S
Updated On : 1 Oct 2013, 12:46 pm

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 30
ಎಲ್ಲರ ಸಮಸ್ಯೆಗಳ ಕುರಿತು ಕೃತಿ ರಚಿಸಬೇಕು. ಈ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಸಲಹೆ ನೀಡಿದರು.
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಸಂಜೆ ವಿಜಯಲಕ್ಷ್ಮಿ ಪ್ರಕಾಶನ ಪ್ರಕಟಿಸಿರುವ ಡಾ.ಬಿ.ಟಿ. ನಾಗರಾಜ ಅವರ ಆತ್ಮಗೀತ ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು. ವೈಚಾರಿಕ ಭಾವ, ಭಕ್ತಿ, ಅನ್ವೇಷಣೆ, ವಿವೇಕ, ಸಂಸ್ಕೃತಿಯಿಂದ ಕೃತಿ ರಚಿಸಬೇಕು. ವಿಮರ್ಶೆ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಾಹಿತಿ ಡಾ.ಸಿಪಿಕೆ ಮಾತನಾಡಿ, ಇದೊಂದು ದಾರ್ಶನಿಕ ಕೃತಿ. ಪ್ರತಿಯೊಂದು ಹಂತದಲ್ಲೂ ಸೂಕ್ತಿ, ಸುಭಾಷಿತ ಒಳಗೊಂಡಿದೆ. ಲೇಖಕ ದಾರ್ಶನಿಕ ಹಿನ್ನೆಲೆಯಲ್ಲಿ ಕೃತಿ ರಚಿಸಿದ್ದಾರೆ ಎಂದರು.
ಎ.ಎಸ್. ನಾಗರಾಜು ಅವರು ಕವನ ವಾಚಿಸಿದರು. ಸಾಹಿತಿಗಳಾದ ಡಾ.ಕೃಷ್ಣಮೂರ್ತಿ ಹನೂರು, ಪ್ರೊ.ನೀಲಗಿರಿ ಎಂ.ತಳವಾರ್, ಪ್ರೊ.ಮೊರಬದ ಮಲ್ಲಿಕಾರ್ಜುನ್, ಲೇಖಕ ಡಾ.ಬಿ.ಟಿ. ನಾಗರಾಜ ಇದ್ದರು. ವಿಜಯಲಕ್ಷ್ಮಿ ಪ್ರಕಾಶನದ ಬಿ.ಪಿ. ವಿಜಯರಾಜು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement