ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿರಿಯ ನಾಗರಿಕರಿಗೆ ಕ್ರೀಡಾಕೂಟ

Vishwanath S
Updated On : 1 Oct 2013, 12:43 pm

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 30
ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಚ್.ಎಸ್. ಬಲರಾಮ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಲು ಈ ಕಾರ್ಯಕ್ರಮ ಸಹಕಾರಿ. ಹಿರಿಯರಾದ ತಾವು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಜಾನಪದ ಗೀತೆ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಯದುಗಿರಿ ಗೋಪಾಲನ್- ಪ್ರಥಮ, ಲಲಿತ ಶರ್ಮ- ದ್ವಿತೀಯ ಬಹುಮಾನ, ಭಾವಗೀತೆ ಸ್ಪರ್ಧೆಯಲ್ಲಿ ಶಾರದಾಂಬ ಗುರುನಾಥ್- ಪ್ರಥಮ, ಎಚ್.ಆರ್. ವಿಶಾಲಾಕ್ಷಿ- ದ್ವಿತೀಯ, ವಿಮಲಮ್ಮ ಜೋಷಿ- ತೃತೀಯ, ಭಕ್ತಿಗೀತೆ ಸ್ಪರ್ಧೆಯಲ್ಲಿ ಸರಸ್ವತಿ- ಪ್ರಥಮ, ಗೀತ- ದ್ವಿತೀಯ, ಛಾಯಾ- ತೃತೀಯ, ಜಾನಪದ ಗೀತೆ ಪುರುಷರ ವಿಭಾಗದಲ್ಲಿ ಮಹಾಬಲೇಶ್ವರ- ಪ್ರಥಮ, ವೆಂಕಟೇಶ್- ದ್ವಿತೀಯ, ಭಾವಗೀತೆ ಸ್ಪರ್ಧೆಯಲ್ಲಿ ಅಚ್ಯುತ ಭಟ್- ಪ್ರಥಮ, ಮಹಾಬಲೇಶ್ವರ- ದ್ವಿತೀಯ, ಏಕಪಾತ್ರಾಭಿನಯ ಲಲಿತ ಶರ್ಮ- ಪ್ರಥಮ, ವೇಷಭೂಷಣ ಸ್ಪರ್ಧೆಯಲ್ಲಿ ಯದುಗಿರಿ ಗೋಪಾಲನ್ ಪ್ರಥಮ ಬಹುಮಾನ ಗಳಿಸಿದ್ದಾರೆ.
ಸಂಘದ ಅಧ್ಯಕ್ಷ ಪಿ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಶ್ಯಾಮಲಾ ಮೂರ್ತಿ, ಕಿರುತೆರೆ ಕಲಾವಿದೆ ಯದುಗಿರಿ ಗೋಪಾಲನ್, ಡಾ.ಎಚ್.ಕೆ. ರಾಮನಾಥ್, ಡಿ.ಎಚ್. ಅಮರ್‌ದಾಸ್, ಎಚ್.ಎಂ. ಗುರುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement