ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೋನಿಗೆ ಬಿದ್ದ ಕರಡಿ

Rashmi Kasaragodu
Updated On : 2 Apr 2014, 2:57 am

ಕೆ.ಆರ್.ಪೇಟೆ: ನಾಗರಿಕರಿಗೆ ತೊಂದರೆ ಕೊಡುತ್ತಿದ್ದ ಕರಡಿಯೊಂದು ಅರಣ್ಯ ಇಲಾಖೆಯು ಇರಿಸಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ. ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ಬಿ.ಕಲ್ಲಹಳ್ಳಿ ಬಳಿಯ ಬೋರೇಗೌಡರ ಜಮೀನು, ಹರಿರಾಯನಹಳ್ಳಿ ಬಳಿಯ ಕಬ್ಬಿನ ಗದ್ದೆ, ಅಗ್ರಹಾರಬಾಚಹಳ್ಳಿ ಬಳಿಯ ಬಿ.ಕೋಡಿಹಳ್ಳಿಯ ಬಳಿ ಈಗಾಗಲೇ ಕಾರ್ಯಾಚರಣೆ ನಡೆಸಿ ಎರಡು ಕರಡಿಗಳನ್ನು ಹಿಡಿಯಲಾಗಿತ್ತು.
ಮಂಗಳವಾರ ಮತ್ತೊಂದು ಕರಡಿಯು ಬೋನಿಗೆ ಸಿಕ್ಕಿಬಿದ್ದಿದೆ. ವಿಷಯ ತಿಳಿದ ಸುತ್ತಮುತ್ತಲಿನ ನಾಗರಿಕರು ತಂಡೋಪ ತಂಡವಾಗಿ ಆಗಮಿಸಿ ಕರಡಿ ವೀಕ್ಷಿಸಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬೋನಿಗೆ ಸಿಕ್ಕಿಬಿದ್ದಿರುವ 3ನೇ ಕರಡಿ ಇದಾಗಿದೆ.
ಬೊಪ್ಪನಹಳ್ಳಿ, ಅರೆಬೊಪ್ಪನಹಳ್ಳಿ, ಬೇಲದಕೆರೆ, ಚಟ್ಟೇನಹಳ್ಳಿ, ಬೊಮ್ಮನಾಯಕನಹಳ್ಳಿ ಭಾಗದಲ್ಲಿ ಇನ್ನೂ ಒಂದೆರಡು ಕರಡಿಗಳು ಇರುವ ಸಾಧ್ಯತೆಗಳಿವೆ. ಈ ಕರಡಿಗಳನ್ನೂ ಹಿಡಿದು ನೆಮ್ಮದಿಯಿಂದ ಬೇಸಾಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ರೈತರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಅನಂತಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಸಿದ್ದರಾಜು, ಸಹಾಯಕ ಅಧಿಕಾರಿ ರಾಘವೇಂದ್ರ ಭೇಟಿ ನೀಡಿ ಬೋನಿಗೆ ಸಿಕ್ಕಿ ಬಿದ್ದಿರುವ ಕರಡಿಯನ್ನು ಕೊಳ್ಳೇಗಾಲದ ಕರಡಿ ವನ್ಯಧಾಮಕ್ಕೆ ಸಾಗಿಸಲಾಗುತ್ತದೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement