ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು ಪಾಕ್ ಕಿರುಚಿತ್ರಕ್ಕೆ ಆಯ್ಕೆ

Rashmi Kasaragodu
Updated On : 2 Apr 2014, 2:39 am

ಮೈಸೂರು: ಕಳೆದ ಎರಡು ದಿನಗಳಿಂದ ಮೈಸೂರು ಪಾಕ್ ಕಿರುಚಿತ್ರಕ್ಕಾಗಿ ನಡೆದ ಪ್ರತಿಭಾ ಶೋಧ ಕಾರ್ಯಕ್ರಮದಲ್ಲಿ ನಾಯಕ ಹಾಗೂ ನಾಯಕಿ ಸೇರಿದಂತೆ ನಟರನ್ನು ಆಯ್ಕೆ ಮಾಡಲಾಯಿತು. ಕುವೆಂಪುನಗರದ ವೀಣೆ ಶೇಷಣ್ಣ ಸಭಾಂಗಣದಲ್ಲಿ ಕನಸು ಪ್ರೊಡಕ್ಷನ್ ಏರ್ಪಡಿಸಿದ್ದ ಆಯ್ಕೆ ಸ್ಪರ್ಧೆಯಲ್ಲಿ, ನಾಯಕನಾಗಿ ಪ್ರಧಾನ್, ನಾಯಕಿಯಾಗಿ ಆಷಿಕಾ ಹಾಗೂ 8 ಮಂದಿ ಬಾಲ ನಟರು ಹಾಗೂ 15 ಮಂದಿ ನೃತ್ಯಗಾರರು,10 ಮಂದಿ ಗಾಯಕ ಮತ್ತು ಗಾಯಕಿಯರು ಹಾಗೂ 4 ಮಂದಿ ನಿರೂಪಕರನ್ನು ಆಯ್ಕೆ ಮಾಡಲಾಯಿತು. ಸುಮಾರು 80 ಮಂದಿ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರ ಪ್ರತಿಭೆ ಗುರುತಿಸಿ ಕಲಾವಿದರನ್ನು ಆಯ್ಕೆ ಮಾಡಲಾಯಿತು. ಏಪ್ರಿಲ್ ಮೂರನೇ ವಾರದಲ್ಲಿ ಚಿತ್ರೀಕರಣ ಆರಂಭಿಸಲಾಗುವುದು. ಮೇ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಸಿ.ಬಿ. ಅವಿನಾಶ್ ತಿಳಿಸಿದರು.  ನಿರ್ಮಾಣದ ವ್ಯವಸ್ಥಾಪಕ ನವೀನ್ ಇದ್ದರು.


 'ಕಲಾ ಜಗತ್ತನ್ನೂ ಬಿಡದ ಜಾಗತೀಕರಣ'
ಮೈಸೂರು: ಜಾಗತೀಕರಣದ ಪ್ರಭಾವ ಚಿತ್ರಕಲಾ ಜಗತ್ತನ್ನೂ ಬಿಟ್ಟಿಲ್ಲ. ಯಾವ ಕಲಾವಿದನ ಕಲಾಕೃತಿಗಳು ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತದೋ, ಅದನ್ನು ಶ್ರೇಷ್ಠ ಕಲಾಕೃತಿಯೆಂದು ಪರಿಗಣಿಸುವ ಮನೋಭಾವ ಹೆಚ್ಚಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ವಿಷಾದಿಸಿದರು. ರಾಮ್‌ಸನ್ಸ್ ಕಲಾ ಪ್ರತಿಷ್ಠಾನವು ನಜರಬಾದಿನ ಪ್ರತಿಮಾ ಕಲಾ ಗ್ಯಾಲರಿಯಲ್ಲಿ ಕಲಾ ಧಾರ ಚಿತ್ರಕಲಾ ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾನುವಾರ ಕಲಾಂತರ ತಲಾಂತರ ತಿರುಪಳ್ಳಯ್ಯ ರಾಜು ಅವರ ಸಂಪ್ರದಾಯ ಸಿರಿ ಎಂಬ ವಿಷಯ ಕುರಿತು ಮಾತನಾಡಿದರು. ಸಾಂಪ್ರದಾಯಿಕ ಕಲೆಯು ಅನುಕರಣೀಯ ಕಲೆ ಎಂಬ ಅಪವಾದ ಸಲ್ಲದು. ಯಾವುದೇ ಸಾಂಪ್ರದಾಯಿಕ ಕಲಾವಿದ ಅನುಕರಣೆಯಿಂದ ಚಿತ್ರಕಲೆ ರಚಿಸುತ್ತಾನೆ ಎಂಬ ಆರೋಪವಿದೆ. ಶಿಲ್ಪಶಾಸ್ತ್ರದಲ್ಲಿ ದೇವಾನು ದೇವತೆಗಳ ಚಿತ್ರಗಳನ್ನು ಹಾಗೆಯೇ ರಚಿಸಬೇಕೆಂದು ಹೇಳಲಾಗಿದೆ. ಅದನ್ನು ನೋಡಿ ಚಿತ್ರ ಬಿಡಿಸುತ್ತಾರೆ ಎಂಬುದೇ ಈ ಅಪವಾದ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement