ವಿದ್ಯಾರ್ಥಿ ಬೆಳವಣಿಗೆಗೆ ಪೋಷಕರ ಪಾತ್ರ ಮುಖ್ಯ'
ಹುಣಸೂರು: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾದದು ಎಂದು ಸೃಜನ ಸರೋವರ ವಿದ್ಯಾಸಂಸ್ಥೆಯ ಅಧ್ಯಕ್ಷ ಸಂತೋಷ್ಕುಮಾರ್ ಅಭಿಪ್ರಾಯಪಟ್ಟರು. ತಾಲೂಕಿನ ನಲ್ಲೂರುಪಾಲ ಗ್ರಾಮದಲ್ಲಿರುವ ಅಕ್ಷಯ ಸಿಂಚನ ಚಿಗುರು ಸಂಸ್ಥೆಯ ಸೃಜನ ಸರೋವರ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ತಮ್ಮದೇನೂ ಜವಾಬ್ದಾರಿಯಿಲ್ಲವೆಂದು ತಿಳಿಯಬಾರದು. ಮನೆಯಲ್ಲಿ ಮಕ್ಕಳಿಗೆ ಓದುವ ಸೂಕ್ತ ಪರಿಸರ ನಿರ್ಮಾಣ ಕಲ್ಪಿಸಬೇಕು. ಮಕ್ಕಳು ಕಡಿಮೆ ಅಂಕ ಪಡೆದಾಗ ಅವರನ್ನು ನಿಂದಿಸದೆ ಹೆಚ್ಚು ಅಂಕ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು. ಸಂಸ್ಥೆಯ ನಿರ್ದೇಶಕ ಸುರೇಂದ್ರ ಹೊಸಪೆಂಜಳ್ಳಿ ಭಾಗವಹಿಸಿದ್ದರು.